ಸಂತಾನಕ್ಕಾಗಿ ಡಾಕ್ಟರ್ ಹಾಗೂ ತಂದೆ ಜತೆ ಮಲಗುವಂತೆ ಗಂಡನಿಂದ ಪತ್ನಿಗೆ ಬಲವಂತ!

25 ವರ್ಷದ ಗೃಹಿಣಿ ತನ್ನ ಮೇಲೆ ಮಾವ ಅತ್ಯಾಚಾರಕ್ಕೆ ಯತ್ನಿಸಿದ್ದು ಕೈಲಾಗದ ಗಂಡ ಡಾಕ್ಟರ್ ಜತೆ ಮಲಗುವಂತೆ ಬಲವಂತ ಮಾಡುತ್ತಿದ್ದ ಎಂದು ಮಹಿಳೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಅಹಮದಾಬಾದ್: 25 ವರ್ಷದ ಗೃಹಿಣಿ ತನ್ನ ಮೇಲೆ ಮಾವ ಅತ್ಯಾಚಾರಕ್ಕೆ ಯತ್ನಿಸಿದ್ದು ಕೈಲಾಗದ ಗಂಡ ಡಾಕ್ಟರ್ ಜತೆ ಮಲಗುವಂತೆ ಬಲವಂತ ಮಾಡುತ್ತಿದ್ದ ಎಂದು ಮಹಿಳೆ ದೂರು ನೀಡಿದ್ದಾರೆ. 
2016ರ ಮಾರ್ಚ್ ತಿಂಗಳಲ್ಲಿ ಮಹಿಳೆಗೆ ನಿಕೇಶ್ ಗಿರಿ ಎಂಬಾತನ ಜತೆ ಮದುವೆಯಾಗಿತ್ತು. ಮೊದಲ ರಾತ್ರಿ ನಿಕೇಶ್ ನಿಮ್ಮ ಪೋಷಕರು ನಾನು ಕೇಳಿದಷ್ಟು ವರದಕ್ಷಿಣೆ ನೀಡಲಿಲ್ಲ. ಹೀಗಾಗಿ ನಾನು ನಿನ್ನ ಜತೆ ಮಲಗುವುದಿಲ್ಲ ಎಂದು ಹೇಳಿದ್ದಾನೆ. ಅದೇ ರಾತ್ರಿ ಡಾಕ್ಟರ್ ಅನಿಲ್ ಯಾದವ್ ಎಂಬಾತ ಪ್ರಸ್ತದ ಕೋಣೆಗೆ ಬಂದಿದ್ದು ಆತನ ಜತೆ ಮಲಗುವಂತೆ ಪತಿ ಬಲವಂತ ಮಾಡುತ್ತಿದ್ದ ಇದಕ್ಕೆ ಒಪ್ಪದಕ್ಕೆ ಇಬ್ಬರು ನನ್ನನ್ನು ಬಲವಂತವಾಗಿ ಕೋಣೆಯಿಂದ ಹೊರದಬ್ಬಿದ್ದರು ಎಂದು ನೊಂದ ಮಹಿಳೆ ದೂರು ನೀಡಿರುವುದಾಗಿ ಮಹಿಳಾ ಸೆಲ್ ಎಸಿಪಿ ಪೊನ್ನ ಮೊಮಾಯ ಅವರು ಹೇಳಿದ್ದಾರೆ. 
ಇದಾದ ಬಳಿಕ ಗಂಡ ಗಿರಿ ಕೆಲವೊಮ್ಮೆ ನನ್ನನ್ನು ಮುಟ್ಟಲು ಪ್ರಯತ್ನಿಸುತ್ತಿದ್ದ ಆದರೆ ಆತನಿಗೆ ಲೈಂಗಿಕ ಸಾಮರ್ಥ್ಯ ಇಲ್ಲದಿದ್ದರಿಂದ ನನ್ನ ಕೋಣೆಗೆ ಡಾಕ್ಟರ್ ಅನ್ನು ಕಳುಹಿಸುತ್ತಿದ್ದ ಆದರೆ ಆತನ ಜತೆ ಮಲಗಲು ಮಹಿಳೆ ಒಪ್ಪಲಿಲ್ಲ ಎಂದು ಎಸಿಪಿ ಹೇಳಿದ್ದಾರೆ. 
ಇಂತಹ ಅನ್ಯಾಯದ ಸ್ಥಿತಿಯಲ್ಲಿ ಸಾಂತ್ವನ ಹೇಳಬೇಕಿದ್ದ ಮಾವ ಸಹ ಆಕೆಯ ಕೋಣೆಗೆ ಬಂದು ಮಲಗುತ್ತಿದ್ದರು. ಆಕೆ ಮಲಗಿದ ಮೇಲೆ ಆತ ಬಂದು ಆಕೆಯ ದೇಹವನ್ನು ಮುಟ್ಟುತ್ತ ಸೆಕ್ಸ್ ಮಾಡಲು ಬಲವಂತ ಮಾಡುತ್ತಿದ್ದರು. ಇದರಿಂದ ಹೆದರಿದ ಮಹಿಳೆ ತನ್ನನ್ನು ರಕ್ಷಿಸಿಕೊಳ್ಳಲು ಕೋಣೆಯಿಂದ ಹೊರಬಂದಿದ್ದಾಗಿ ಮಹಿಳೆ ಕೊಟ್ಟ ದೂರಿನಲ್ಲಿ ತಿಳಿಸಲಾಗಿದೆ ಎಂದು ಎಸಿಪಿ ಪನ್ನ ಹೇಳಿದ್ದಾರೆ. 
ಈ ಸಂಬಂಧ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿರುವುದಾಗಿ ಎಸಿಪಿ ಪನ್ನ ಮೊಮಾಯ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com