ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ: ದೂರು ದಾಖಲಿಸಲು ಪೋರ್ಟಲ್ ಆರಂಭಿಸಿದ ಸರ್ಕಾರ

ಮಹಿಳೆಯರು ಕೆಲಸದ ಸ್ಥಳದಲ್ಲಿ ತಮ್ಮ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಬಗ್ಗೆ ಆನ್ ಲೈನ್ ಮೂಲಕ ದೂರು ನೀಡುವುದಕ್ಕಾಗಿ ಕೇಂದ್ರ.....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಮಹಿಳೆಯರು ಕೆಲಸದ ಸ್ಥಳದಲ್ಲಿ ತಮ್ಮ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಬಗ್ಗೆ ಆನ್ ಲೈನ್ ಮೂಲಕ ದೂರು ನೀಡುವುದಕ್ಕಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಅವರು ಪೋರ್ಟಲ್ ವೊಂದಕ್ಕೆ ಮಂಗಳವಾರ ಚಾಲನೆ ನೀಡಿದ್ದಾರೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಈ ವೆಬ್ ಸೈಟ್ ನಲ್ಲಿ 'SHe-box' (sexual harassment electronic box) ಅನ್ನು ಹೋಸ್ಟ್ ಮಾಡಲಾಗಿದ್ದು, ಮಹಿಳೆಯರು ಆನ್ ಲೈನ್ ಮೂಲಕ ದೂರು ನೀಡಬಹುದಾಗಿದೆ.
ಈ ಹಿಂದೆ ಸರ್ಕಾರಿ ಮಹಿಳಾ ನೌಕರರಿಗಾಗಿ ವೆಬ್ ಸೈಟ್ ಬಿಡುಗಡೆ ಮಾಡಲಾಗಿತ್ತು. ಈಗ ಅದನ್ನು ಖಾಸಗಿ ವಲಯದ ಮಹಿಳಾ ನೌಕರರಿಗೂ ವಿಸ್ತರಿಸಲಾಗಿದೆ ಎಂದು ಮನೇಕಾ ಗಾಂಧಿ ಅವರು ವರದಿಗಾರರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com