ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಿರುವುದರಿಂದ ದಟ್ಟ ಮಂಜು ಆವರಿಸಿದ್ದು, ದಾರಿ ಸ್ಪಷ್ಟವಾಗಿ ಕಾಣದ ಪರಿಣಾಮ 18 ವಾಹನಗಳು ಸರಣಿ ಅಪಘಾತಕ್ಕೀಡಾಗಿವೆ.
ಆಗ್ರಾ-ನೋಯ್ಡಾ ನಡುವೆ ಸಂಪರ್ಕ ಕಲ್ಪಿಸುವ ಯಮುನಾ ಹೆದ್ದಾರಿಯಲ್ಲಿ 18 ವಾಹನಗಳು ಸರಣಿ ಅಪಘಾತಕ್ಕೀಡಾಗಿದ್ದು, ಘಟನೆ ನಡೆದಾಗ ವಾಹನಗಳ ವೇಗವನ್ನು ಕಡಿಮೆ ಮಾಡುವಂತೆ ಫುಟ್ ಪಾಥ್ ನಲ್ಲಿದ್ದ ಜನರು ಚಾಲಕರಿಗೆ ಮನವಿ ಮಾಡುತ್ತಿದ್ದರು.
ಅಪಘಾತದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಅಪಘಾತ ನಡೆದಿರುವ ವಿಡೀಯೋವನ್ನು ಸ್ಥಳೀಯರು ದಾಖಲಿಸಿಕೊಂಡಿದ್ದಾರೆ.