ಬಿರಿಯಾನಿ ತಯಾರಿಸಿದ್ದ ಜೆಎನ್ ಯು ವಿವಿಯ 4 ವಿದ್ಯಾರ್ಥಿಗಳಿಗೆ ದಂಡ!

ಆಡಳಿತ ವಿಭಾಗದ ಕಚೇರಿ ಬಳಿ ಬಿರಿಯಾನಿ ತಯಾರಿಸಿದ್ದಕ್ಕಾಗಿ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗೆ 6,000 ರೂಪಾಯಿಗಳ ದಂಡ ವಿಧಿಸಲಾಗಿದ್ದು, ಘಟನೆಯಲ್ಲಿ ಭಾಗಿಯಾಗಿದ್ದ ಇನ್ನೂ 3 ವಿದ್ಯಾರ್ಥಿಗಳಿಗೆ 6,000-10,000 ರೂಪಾಯಿಗಳ ದಂಡ ವಿಧಿಸಲಾಗಿದೆ.
ಜವಾಹರ್ ಲಾಲ್ ನೆಹರು ವಿವಿ
ಜವಾಹರ್ ಲಾಲ್ ನೆಹರು ವಿವಿ
ನವದೆಹಲಿ: ಆಡಳಿತ ವಿಭಾಗದ ಕಚೇರಿ ಬಳಿ ಬಿರಿಯಾನಿ ತಯಾರಿಸಿದ್ದಕ್ಕಾಗಿ ಜವಾಹರ್ ಲಾಲ್ ನೆಹರು  ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗೆ 6,000 ರೂಪಾಯಿಗಳ ದಂಡ ವಿಧಿಸಲಾಗಿದ್ದು, ಘಟನೆಯಲ್ಲಿ ಭಾಗಿಯಾಗಿದ್ದ ಇನ್ನೂ 3 ವಿದ್ಯಾರ್ಥಿಗಳಿಗೆ 6,000-10,000 ರೂಪಾಯಿಗಳ ದಂಡ ವಿಧಿಸಲಾಗಿದೆ. 
ದಂಡ ಪಾವತಿ ಮಾಡಲು ವಿದ್ಯಾರ್ಥಿಗಳಿಗೆ 10 ದಿನಗಳ ಕಾಲಾವಕಾಶ ನೀಡಲಾಗಿದ್ದು, ದಂಡ ಪಾವತಿ ಮಾಡಲು ವಿಫಲವಾದರೆ ಕಠಿಣ ಶಿಕ್ಷೆಗೆ ಗುರಿಯಾಗುವುದಾಗಿ ಎಚ್ಚರಿಕೆ ನೀಡಲಾಗಿದೆ. ಪ್ರೊಕ್ಟೋರಿಯಲ್ ತನಿಖೆಯಲ್ಲಿ ಆಡಳಿತ ವಿಭಾಗದ ಕಚೇರಿ ಬಳಿ ಬಿರಿಯಾನಿ ತಯಾರಿಸಿ, ಮೂವರು ವಿದ್ಯಾರ್ಥಿಗಳೊಂದಿಗೆ ಸೇವನೆ ಮಾಡಿರುವ ಅಪರಾಧ ಸಾಬೀತಾಗಿದೆ ಎಂದು ಮುಖ್ಯ ಪ್ರೋಕ್ಟಾರ್ ಕುಶಾಲ್ ಕುಮಾರ್ ಹೇಳಿದ್ದಾರೆ. 
ಆಡಳಿತ ವಿಭಾಗದ ಕಚೇರಿಯ ಮೆಟ್ಟಿಲ ಬಳಿ ಬಿರಿಯಾನಿ ತಯಾರಿಸಿರುವುದು ಜೆಎನ್ ಯು ಅಶಿಸ್ತಿನ ವರ್ತನೆಯಾಗಿದ್ದು ಬಿರಿಯಾನಿ ತಯಾರಿಸಿದ್ದ ವೇಳೆ ಇದ್ದ ವಿದ್ಯಾರ್ಥಿಗಳಾದ ಚೇಪಾಲ್ ಶೆರ್ಪಾ, ಅಮೀರ್ ಮಲಿಕ್ ಮತ್ತು ಮನೀಶ್ ಕುಮಾರ್ ಗೆ 6,000 ರೂಪಾಯಿ ದಂಡ ವಿಧಿಸಲಾಗಿದ್ದು, ಜೆಎನ್ ಯು ಪ್ರಧಾನ ಕಾರ್ಯದರ್ಶಿ ಶತರೂಪ ಚಕ್ರವರ್ತಿ ಗೆ 10,000 ರೂಪಾಯಿ ದಂಡ ವಿಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com