ಗುಜರಾತ್ ರಾಜ್ಯದಲ್ಲಿ ವಿಕಾಸಕ್ಕೆ ಹುಚ್ಚು ಹಿಡಿದಿದೆ: ರಾಹುಲ್ ಗಾಂಧಿ

ಗುಜರಾತ್ ರಾಜ್ಯದಲ್ಲಿ ವಿಕಾಸಕ್ಕೆ ಹುಚ್ಚು ಹಿಡಿದಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ ಹೇಳಿದ್ದಾರೆ...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಬನಸ್ಕಾಂತಾ: ಗುಜರಾತ್ ರಾಜ್ಯದಲ್ಲಿ ವಿಕಾಸಕ್ಕೆ ಹುಚ್ಚು ಹಿಡಿದಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ ಹೇಳಿದ್ದಾರೆ. 
ಗುಜರಾತ್ ರಾಜ್ಯದ ಬನಸ್ಕಾಂತಾದಲ್ಲಿರುವ ಪಕ್ಷದ ಸಾಮಾಜಿದ ಜಾಲತಾಣದ ಸ್ವಯಂ ಸೇವಕರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿರುವ ಅವರು, ವಿರೋಧ ಪಕ್ಷದಲ್ಲಿದ್ದಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಕಚೇರಿಗೆ ಅಗೌರವವನ್ನು ತೋರಿಸಿದ್ದರು. ಆದರೆ, ಕಾಂಗ್ರೆಸ್ ಎಂದಿಗೂ ಆ ರೀತಿ ನಡೆದುಕೊಂಡಿಲ್ಲ ಎಂದು ಹೇಳಿದ್ದಾರೆ. 
ಮೋದಿಯವರ ತಪ್ಪುಗಳ ಕುರಿತಂತೆ ಅವರನ್ನು ಗುರಿಯಾಗಿರಿಸರಬಹುದು, ಬಿಜೆಪಿಗೆ ಸಮಸ್ಯೆಯನ್ನು ಮಾಡಿರಬಹುದು ಅದರೆ, ಎಂದಿಗೂ ಪ್ರಧಾನಮಂತ್ರಿಗಳ ಕಚೇರಿಗೆ ಅಗೌರವವನ್ನು ತೋರಿಲ್ಲ. ಮೋದಿಯವರು ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಪ್ರಧಾನಮಂತ್ರಿಗಳ ಬಗ್ಗೆ ಅಗೌರವ ರೀತಿಯಲ್ಲಿ ಮಾತನಾಡಿದ್ದರು. ಅವರಿಗೂ ನಮಗೂ ಇರುವ ವ್ಯತ್ಯಾಸವೆಂದರೆ ಇದೇ ಎಂದು ತಿಳಿಸಿದ್ದಾರೆ. 
ಮೋದಿಯವರು ನಮ್ಮ ಬಗ್ಗೆ ಏನು ಹೇಳುತ್ತಾರೋ ಅದು ಮುಖ್ಯಮವಲ್ಲ. ನಾನು ಸತ್ಯವನ್ನಷ್ಟೇ ಹೇಳುತ್ತೇವೆ. ಗುಜರಾತ್ ರಾಜ್ಯದಲ್ಲಿ ವಿಕಾಸಕ್ಕೆ ಹುಚ್ಚು ಹಿಡಿದಿದೆ. ಬಿಜೆಪಿ ಹಾಗೂ ಕೇಂದ್ರ ಸರ್ಕಾರ ತಮ್ಮ ತಪ್ಪುಗಳನ್ನು ಎಂದಿಗೂ ಆತ್ಮಾವಲೋಕನ ಮಾಡಿಕೊಂಡಿಲ್ಲ. ಕಾಂಗ್ರೆಸ್ ಪಕ್ಷದ ಪ್ರಮುಖ ಸಿದ್ಧಾಂತವೇ ಸ್ವಯಂ ಆತ್ಮಾವಲೋಕನ ಮಾಡಿಕೊಳ್ಳುವುದು. ನಾವು ಯಾವುದೇ ತಪ್ಪು ಮಾಡಿದ್ದರೂ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ಮೋದಿಯವರು ಎಂದಿಗೂ ಸರಕು ಮತ್ತು ಸೇವಾ ತೆರಿಗೆ, ನೋಟು ನಿಷೇಧ ಕುರಿತು ತಮ್ಮ ತಪ್ಪನ್ನು ಎಂದಿಗೂ ಒಪ್ಪಿಕೊಂಡಿಲ್ಲ. 
ಗುಜರಾತ್ ರಾಜ್ಯದಲ್ಲಿ ಬಿಜೆಪಿ ಸುಳ್ಳು ರಾಜಕೀಯವನ್ನು ಮಾಡುತ್ತಿದೆ. ದೇಶದಲ್ಲಿ ಕೆಲ ತಪ್ಪುಗಳಾಗುತ್ತಿರುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ದೇಶದಲ್ಲಿ ಸಾಕಷ್ಟು ಶಕ್ತಿಯಿರುವುದೂ ನಮಗೆ ಗೊತ್ತಿದೆ. ನಮ್ಮ ದೇಶದ ದೊಡ್ಡ ಶಕ್ತಿಯಿಂದರೆ ಸತ್ಯವನ್ನು ಒಪ್ಪಿಕೊಳ್ಳುವುದು. ಕಾಂಗ್ರೆಸ್ ಪಕ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಸತ್ಯದ ಪರವಾಗಿ ಗೆಲವು ಸಾಧಿಸಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com