ಇಂಫಾಲ: ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ಐಇಡಿ ಸ್ಫೋಟಗೊಂಡ ಪರಿಣಾಮ ಇಬ್ಬರು ಯೋಧರು ಹುತಾತ್ಮರಾಗಿದ್ದು, 6 ಜನರಿಗೆ ಗಾಯಗಳಾಗಿರುವ ಘಟನೆ ಸೋಮವಾರ ನಡೆದಿದೆ.
ಚಂದೇಲ್ ಟೌನ್'ನಲ್ಲಿರುವ ಮಹಾಮನಿ ಗ್ರಾಮದಲ್ಲಿ ಅಸ್ಸಾಂ ರೈಫಲ್ಸ್ ಪಡೆ ಗಸ್ತು ತಿರುಗುತ್ತಿತ್ತು. ಈ ವೇಳೆ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಐಇಡಿ ಸ್ಫೋಟಗೊಳ್ಳುತ್ತಿದ್ದಂತೆಯೇ ಸ್ಥಳದಲ್ಲಿಯೇ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಬಳಿಕ ಗಾಯಗೊಂಡಿದ್ದ 7 ೋಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಗಾಯಗೊಂಡಿದ್ದ 7 ಯೋಧರ ಪೈಕಿ ಮತ್ತೋರ್ವ ಯೋಧ ಹುತಾತ್ಮರಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಹುತಾತ್ಮರಾದ ಯೋಧರನ್ನು ಇಂದ್ರ ಸಿಂಗ್ ಮತ್ತು ಸೋಹನ್ ಲಾನ್ ಎಂದು ಹೇಳಲಾಗುತ್ತಿದ್ದು, ಗಾಯಾಳುಗಳನ್ನು ಎನ್. ಶ್ಯಾಮ್ ಕುಮಾರ್, ಎಸ್. ಸರ್ಕಾರ್, ತಿಜೋಂದ್ರ ನಾಥ್ ದಾಸ್, ರಾಮ್ ಗೋವಿಂದ್ ಸಿಂಗ್, ನಿರ್ಮಲ್ ರಾಯ್ ಮತ್ತು ಲಾಲ್ ನುನ್ಪುಯ್ಯಾ ಎಂದು ಗುರ್ತಿಸಲಾಗಿದೆ.