ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನ
ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನ

ವಿಜ್ಞಾನ ಕ್ಷೇತ್ರದ ಆರು ಸಾಧಕರಿಗೆ ಇನ್ಫೋಸಿಸ್ ವಿಜ್ಞಾನ ಪುರಸ್ಕಾರ ಘೋಷಣೆ

ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನವು ಪ್ರಸಕ್ತ ಸಾಲಿನ ‘ಇನ್ಫೋಸಿಸ್‌ ವಿಜ್ಞಾನ‘ ಯನ್ನು ಘೋಷಿಸಿದೆ. ಒಟ್ಟು ಆರು ಸಾಧಕರು ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ
ಬೆಂಗಳೂರು: ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನವು ಪ್ರಸಕ್ತ ಸಾಲಿನ ‘ಇನ್ಫೋಸಿಸ್‌ ವಿಜ್ಞಾನ‘ ಪ್ರಶಸ್ತಿ' ಯನ್ನು ಘೋಷಿಸಿದೆ. ಒಟ್ಟು ಆರು ಸಾಧಕರು ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ
ಇನ್ಫೋಸಿಸ್ ಪ್ರಶಸ್ತಿಯು  65 ಲಕ್ಷ ರೂ.ನಗದು, ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದು ವಿಜ್ಞಾನದ ವಿವಿಧ ಶಾಖೆಗಳಲ್ಲಿ  ಸಾಧನೆ ಮಾಡಿದ ಆರು ಮಂದಿಗೆ ಈ  ಪ್ರಶಸ್ತಿ ನೀಡಲಾಗುತ್ತದೆ. 
ಪ್ರಶಸ್ತಿ ಗೆ ಆಯ್ಕೆಯಾದವರ ಪಟ್ಟಿ ಹೀಗಿದೆ-
ಜೀವ ವಿಜ್ಞಾನ- ಉಪೇಂದ್ರ ಎಸ್. ಬಲ್ಲಾ, ಸಮಾಜ ವಿಜ್ಞಾನ- ಲಾರೆನ್ಸ್ ಲಿಯಾಂಗ್, ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ– ಸಂಘಮಿತ್ರ ಬಂದೋಪಧ್ಯಾಯ, ಭೌತ ವಿಜ್ಞಾನ- ಯಮುನಾ ಕೃಷ್ಣನ್‌, , ಗಣಿತ- ರಿತುಬರ ಮುನ್ಷಿ, ಮಾನವಿಕ ಶಾಸ್ತ್ರ ವಿಭಾಗದಿಂದ ಅನನ್ಯಾ ಕಬೀರ್.
2018  ಜ.10 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com