ಉತ್ತರ ಪ್ರದೇಶದ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ವಸೀಂ ರಿಝ್ವಿ ಇಂತಹುದೊಂದು ಸಲಹೆ ನೀಡಿದ್ದು, ಇದರಿಂದ ವಿವಾದ ಇತ್ಯರ್ಥ ಸಾಧ್ಯ ಎಂದು ಹೇಳಿದ್ದಾರೆ. ಈ ಸಂಬಂಧ ತಾವು ಈಗಾಗಲೇ ಸಾಕಷ್ಟು ಧಾರ್ಮಿಕ ಮುಖಂಡರೊಂದಿಗೆ ಚರ್ಚಿಸಿದ್ದು, ಅವರು ಕೂಡ ತಮ್ಮ ಈ ಸಲಹೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಆಯೋಧ್ಯೆ ವಿವಾದ ಶಾಂತಿ ಮತ್ತು ಸೌಹಾರ್ಧಯುತವಾಗಿ ಅಂತ್ಯಕಾಣಬೇಕು ಎಂಬ ಉದ್ದೇಶದಿಂದ ತಾವು ಈ ಹಿಂದೆ ಸಾಕಷ್ಟು ಧಾರ್ಮಿಕ ಮುಖಂಡರೊಂದಿಗೆ ತಮ್ಮ ಈ ಸಲಹೆ ಕುರಿತು ಚರ್ಚಿಸಲಾಗಿತ್ತು ಎಂದು ಹೇಳಿದ್ದಾರೆ.