ಕಾಂಗ್ರೆಸ್-ಹಾರ್ದಿಕ್ ಒಪ್ಪಂದ: ಮೂರ್ಖರ ಸೂತ್ರಕ್ಕೆ ಮೂರ್ಖರ ಒಪ್ಪಿಗೆ- ನಿತಿನ್ ಪಟೇಲ್

ಕಾಂಗ್ರೆಸ್ ಹಾಗೂ ಪಟೇಲ್ ಸಮುದಾಯದ ಹೋರಾಟಗಾರ ಮೈತ್ರಿ ಮಾಡಿಕೊಂಡಿರುವುದಕ್ಕೆ ವ್ಯಂಗ್ಯವಾಡಿರುವ ಗುಜರಾತ್ ರಾಜ್ಯ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು, ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತಿ ಮೂರ್ಖು ನೀಡಿದ ಸೂತ್ರವನ್ನು ಮೂರ್ಖರು...
ಗುಜರಾತ್ ರಾಜ್ಯ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್
ಗುಜರಾತ್ ರಾಜ್ಯ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್
ಅಹಮದಾಬಾದ್: ಕಾಂಗ್ರೆಸ್ ಹಾಗೂ ಪಟೇಲ್ ಸಮುದಾಯದ ಹೋರಾಟಗಾರ ಮೈತ್ರಿ ಮಾಡಿಕೊಂಡಿರುವುದಕ್ಕೆ ವ್ಯಂಗ್ಯವಾಡಿರುವ ಗುಜರಾತ್ ರಾಜ್ಯ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು, ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತಿ ಮೂರ್ಖು ನೀಡಿದ ಸೂತ್ರವನ್ನು ಮೂರ್ಖರು ಒಪ್ಪಿಕೊಂಡಿದ್ದಾರೆಂದು ಬುಧವಾರ ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ಮೂರ್ಖರು ನೀಡಿದ ಸೂತ್ರವನ್ನು ಮೂರ್ಖು ಒಪ್ಪಿಕೊಂಡಿದ್ದಾರೆ. ಹಾರ್ದಿಕ್ ನಂತರ ದೊಡ್ಡ ಮೂರ್ಖ ವ್ಯಕ್ತಿಯನ್ನು ನಾನು ಎಲ್ಲಿಯೂ ನೋಡಿಲ್ಲ. ಹಾರ್ದಿಕ್ ಒಬ್ಬ ಯುವಕ. ಸಮುದಾಯದಿಂದ ಹಾರ್ದಿಕ್ ಪ್ರೀತಿಯನ್ನು ಪಡೆದಿರಬಹುದು. ಆದರೆ, ಶೀಘ್ರದಲ್ಲಿಯೇ ಪಶ್ಚಾತ್ತಾಪವನ್ನು ಪಡಲಿದ್ದಾರೆಂದು ಹೇಳಿದ್ದಾರೆ. 
ಪಟೇಲ್ ಸಮುದಾಯಕ್ಕೆ ಶೇ.50ರಷ್ಟು ಮೀಸಲಾತಿ ನೀಡುವುದಾಗಿ ಕಾಂಗ್ರೆಸ್ ಭರವಸೆಯನ್ನು ನೀಡಿದೆ. ಪಟೇಲ್ ಸಮುದಾಯಕ್ಕೆ ಕಾಂಗ್ರೆಸ್ ನೀಡಿರುವ ಮೀಸಲಾತಿ ಭರವಸೆ ದೊಡ್ಡ ಹಾಸ್ಯ ಎಂದು ತಿಳಿಸಿದ್ದಾರೆ. 
ಕಾಂಗ್ರೆಸ್ ಮತ್ತು ಪಟೇಲ್ ಮೀಸಲು ಹೋರಾಟ ನಾಯಕ ಹಾರ್ದಿಕ್ ಪಟೇಲ್ ನಡುವಿನ ಮೈತ್ರಿ ಮಾತುಕತೆ ಮುರಿದೇ ಹೋಯಿತು ಎನ್ನುವಷ್ಟರಲ್ಲಿ ನಿನ್ನೆಯಷ್ಟೇ ಅಚ್ಚರಿಯ ಘೋಷಣೆಯೊಂದು ಹೊರಬಿದ್ದಿತ್ತು, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹಾರ್ದಿಕ್ ಪಟೇಲ್ ಘೋಷಣೆ ಮಾಡಿದ್ದರು. ಈ ಮೂಲಕ 22 ವರ್ಷಗಳಿಂದ ಗುಜರಾತ್ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಕೆಳಗಿಳಿಸುವುದಾಗಿ ಘೋಷಣೆ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com