ಸತ್ಯಭಾಮ ವಿವಿ ಹಿಂಸಾಚಾರ: ಯುವತಿಯ ಆತ್ಮಹತ್ಯೆ ಬುದ್ಧಿಗೇಡಿ ಪ್ರತಿಭಟನೆಗೆ ತಿರುಗಿದ್ದು ಹೇಗೆ ಗೊತ್ತಾ?

ವಿದ್ಯಾರ್ಥಿನಿಯ ಆತ್ಮಹತ್ಯೆಯನ್ನು ನೆಪವಾಗಿಟ್ಟುಕೊಂಡು ಉಳಿದ ವಿದ್ಯಾರ್ಥಿಗಳು ಯಾವುದೇ ಸದುದ್ದೇಶ ಇಲ್ಲದೇ ಸ್ವಾರ್ಥಕ್ಕಾಗಿ ಹಿಂಸಾಚಾರ ಸ್ವರೂಪದ ಪ್ರತಿಭಟನೆಯನ್ನು ನಡೆಸಿದ್ದರೆಂಬುದು ಈಗ ಬಹಿರಂಗವಾಗಿದೆ.
ಸತ್ಯಭಾಮ ವಿವಿ ಹಿಂಸಾಚಾರ
ಸತ್ಯಭಾಮ ವಿವಿ ಹಿಂಸಾಚಾರ
Updated on: 
ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಆರೋಪದಡಿ ಡಿಬಾರ್ ಆಗಿದ್ದ ಸತ್ಯಭಾಮ ವಿವಿ ವಿದ್ಯಾರ್ಥಿನಿ ಮೋನಿಕಾ ರೆಡ್ಡಿ ಆತ್ಮಹತ್ಯೆ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಗೆ ಕಾರಣವಾಗಿತ್ತು. ಆದರೆ ಇದೇ ವಿದ್ಯಾರ್ಥಿನಿಯ ಆತ್ಮಹತ್ಯೆಯನ್ನು ನೆಪವಾಗಿಟ್ಟುಕೊಂಡು ಉಳಿದ ವಿದ್ಯಾರ್ಥಿಗಳು ಯಾವುದೇ ಸದುದ್ದೇಶ ಇಲ್ಲದೇ ಸ್ವಾರ್ಥಕ್ಕಾಗಿ ಹಿಂಸಾಚಾರ ಸ್ವರೂಪದ ಪ್ರತಿಭಟನೆಯನ್ನು ನಡೆಸಿದ್ದರೆಂಬುದು ಈಗ ಬಹಿರಂಗವಾಗಿದೆ. 
ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಶಿಕ್ಷಣ ಸಂಸ್ಥೆ ಸಧ್ಯಕ್ಕೆ ಮುಚ್ಚಲ್ಪಟ್ಟಿದೆ. ಆದರೆ ಮೋನಿಕಾ ರೆಡ್ಡಿಯ ಆತ್ಮಹತ್ಯೆಯನ್ನೇ ಮುಂದಿಟ್ಟುಕೊಂಡು ಕೆಲವು ವಿದ್ಯಾರ್ಥಿಗಳು ಸ್ವಾರ್ಥಕ್ಕಾಗಿ ಬುದ್ಧಿಗೇಡಿ ಪ್ರತಿಭಟನೆ ನಡೆಸಿದ್ದಾರೆಂಬುದು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗವಾಗಿದೆ.
ಪ್ರಾರಂಭದಲ್ಲಿ ವಿದ್ಯಾರ್ಥಿನಿಯ ಆತ್ಮಹತ್ಯೆಯನ್ನು ಖಂಡಿಸಿ, ವಿದ್ಯಾರ್ಥಿಗಳು ತೀವ್ರ ಸ್ವರೂಪದ ಪ್ರತಿಭಟನೆಗೆ ನಡೆಸುತ್ತಿದ್ದಾರೆಂದು ಭಾವಿಸಲಾಗಿತ್ತು. ಆದರೆ ಅದು ಸುಳ್ಳು, ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರತಿಭಟನೆಗೆ ಕೇವಲ ನೆಪವಾಗಿತ್ತು ಎಂಬುದು ನಂತರ ತಿಳಿದುಬಂದಿದೆ.
ನಕಲು ಮಾಡುವ ವಿದ್ಯಾರ್ಥಿಗಳನ್ನು ಡಿಬಾರ್ ಮಾಡುವಂತೆ ಮೋನಿಕಾ ರೆಡ್ಡಿಯನ್ನೂ ಡಿಬಾರ್ ಮಾಡಲಾಗಿತ್ತು. ಆಕೆಯನ್ನು ಅವಮಾನಗೊಳಿಸಲಾಗಿರಲಿಲ್ಲ. ಆದರೆ ಇತರ ವಿದ್ಯಾರ್ಥಿಗಳಿಗಿಂತ ಮೋನಿಕಾ ಸೂಕ್ಷ್ಮವಾಗಿದ್ದಳು ಎಂದು ಹೆಸರು ಹೇಳಲು ಇಚ್ಛಿಸದ ಮೋನಿಕಾ ಸ್ನೇಹಿತರು ತಿಳಿಸಿದ್ದಾರೆ.
ಪ್ರತಿ 51 ವಿದ್ಯಾರ್ಥಿಗಳಿಗೆ ಕಾಲೇಜ್ ನಲ್ಲಿ ಕೌನ್ಸಿಲರ್ ಗಳನ್ನು ನೇಮಕ ಮಾಡಲಾಗಿತ್ತು. ಕೌನ್ಸಿಲರ್ ಗಳ ಬಳಿ ಸಹಾಯಕ್ಕಾಗಿ ಮನವಿ ಮಾಡಬಹುದಾಗಿತ್ತು. ಆದರೆ ಮೋನಿಕಾ ಆ ಕೆಲಸವನ್ನು ಮಾಡಲಿಲ್ಲ. ಘಟನೆಯಲ್ಲಿ ಮ್ಯಾನೇಜ್ಮೆಂಟ್ ನ್ನು ದೂರಲು ಸಾಧ್ಯವಿಲ್ಲ, ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲು ಮೌಖಿಕವಾಗಿ ಹರಡಿದ ಗಾಳಿ ಸುದ್ದಿ ಹಾಗೂ ಸಾಮಾಜಿಕ ಜಾಲತಾಣಗಳು ಕಾರಣ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.  ಸತ್ಯಭಾಮ ವಿವಿಯನ್ನು ಗುರಿಯಾಗಿರಿಸಿಕೊಂಡು ಹಬ್ಬಿಸಲಾದ ಸುಳ್ ಸುದ್ದಿಯೇ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲು ಕಾರಣ ಎಂದು ತಿಳಿದುಬಂದಿದೆ. 
ಸತ್ಯಭಾಮ ವಿವಿಯಲ್ಲಿ ಮ್ಯಾನೇಜ್ಮೆಂಟ್ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯೇನು ಹೊಸತಲ್ಲ. ಈ ಘಟನೆಯನ್ನು ವಿರೋಧಿಸಿ ನಡೆದ ಪ್ರತಿಭನೆಯ ವೇಳೆ ದಾಖಲಾದ ವಿಡಿಯೋದಲ್ಲಿ ಓರ್ವ ವಿದ್ಯಾರ್ಥಿ ವೈ-ಫೈ ಬೇಕು ಎಂದು ಕೂಗುತ್ತಿರುವುದು ವಿದ್ಯಾರ್ಥಿಗಳಿಗೆ ಪ್ರತಿಭಟನೆ ನಡೆಸಲು ವಿದ್ಯಾರ್ಥಿನಿಯ ಆತ್ಮಹತ್ಯೆ ಕೇವಲ ಒಂದು ನೆಪವಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಕೆಲವು ವಿದ್ಯಾರ್ಥಿಗಳೇ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com