ಜಾಗತಿಕ ಉದ್ಯಮ ಮೇಳ: ಭಾರತಕ್ಕೆ ಬಂದಿಳಿದ ಇವಾಂಕಾ ಟ್ರಂಪ್

ಹೈದರಾಬಾದ್‌ ಇಂದಿನಿಂದ ಆರಂಭವಾಗಲಿರುವ ವಾರ್ಷಿಕ ಜಾಗತಿಕ ಉದ್ಯಮ ಮೇಳದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಹಾಗೂ ಅಮೆರಿಕ ಅಧ್ಯಕ್ಷರ ಹಿರಿಯ ಸಲಹೆಗಾರ್ತಿ ಇವಾಂಕಾ ಭಾರತಕ್ಕೆ ಆಗಮಿಸಿದ್ದಾರೆ.
ಭಾರತಕ್ಕೆ ಬಂದಿಳಿದ ಇವಾಂಕಾ
ಭಾರತಕ್ಕೆ ಬಂದಿಳಿದ ಇವಾಂಕಾ
ಹೈದರಾಬಾದ್‌: ಹೈದರಾಬಾದ್‌ ಇಂದಿನಿಂದ ಆರಂಭವಾಗಲಿರುವ ವಾರ್ಷಿಕ ಜಾಗತಿಕ ಉದ್ಯಮ ಮೇಳದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಹಾಗೂ ಅಮೆರಿಕ ಅಧ್ಯಕ್ಷರ ಹಿರಿಯ  ಸಲಹೆಗಾರ್ತಿ ಇವಾಂಕಾ ಭಾರತಕ್ಕೆ ಆಗಮಿಸಿದ್ದಾರೆ.
ಹೈದರಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇವಾಂಕಾ ಟ್ರಂಪ್ ರನ್ನು ಭಾರತದ ಹಿರಿಯ ಅಧಿಕಾರಿಗಳು ಹಾಗೂ ಭದ್ರತಾ ಅಧಿಕಾರಿಗಳು ಸ್ವಾಗತಿಸಿದರು. ನವೆಂಬರ್ 28ರಿಂದ ನವೆಂಬರ್ 30ರವರೆಗೂ  ನಡೆಯಲಿರುವ ಜಾಗತಿಕ ಉದ್ಯಮ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇವಾಂಕಾ ಟ್ರಂಪ್ ಪಾಲ್ಗೊಳ್ಳುತ್ತಿದ್ದು, ಭಾರತ ಮಾತ್ರವಲ್ಲದೇ ದಕ್ಷಿಣ ಏಷ್ಯಾದ ವಿವಿಧ ದೇಶಗಳ ಖ್ಯಾತನಾಮ ಉಧ್ಯಮಗಳೂ ಮೇಳದಲ್ಲಿ  ಪಾಲ್ಗೊಳ್ಳಲಿದ್ದಾರೆ.
ತಂದೆ ಡೊನಾಲ್ಡ್ ಟ್ರಂಪ್ ಅಮೆರಿಕ ದೇಶದ ಅಧ್ಯಕ್ಷರಾದ ಬಳಿಕ ಜಾಗತಿಕ ವೇದಿಕೆಯಲ್ಲಿ ಇವಾಂಕಾ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉದ್ಯಮ ಮೇಳದ ಉದ್ಘಾಟನೆಯಲ್ಲಿ  ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ಸೇರಿದಂತೆ ಅವರ ಸಂಪುಟದ ಪ್ರಮುಖ ಮಂತ್ರಿಗಳು ಉಪಸ್ಥಿತರಿರಲಿದ್ದಾರೆ. ಉದ್ಘಾಟನೆ ಬಳಿಕ ಇವಾಂಕಾ, ತಾಜ್‌ ಫಲಕ್ನಾಮಾ  ಅರಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆತಿಥ್ಯದ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ. ಭಾರತ ಪ್ರವಾಸ ಸಂದರ್ಭದಲ್ಲಿ ಇವಾಂಕಾ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ.
ಪ್ರಮುಖ ಕಂಪನಿಗಳ ಸಿಇಒಗಳು ಸೇರಿದಂತೆ ಸುಮಾರು 1500 ಮಂದಿ ಈ ಪ್ರತಿಷ್ಠಿತ ಮೇಳದಲ್ಲಿ ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com