ಭಾರತದಲ್ಲಿ 36 ಸಾವಿರ ರೊಹಿಂಗ್ಯಾಗಳಿದ್ದು, ಉಗ್ರರ ನಂಟು ಸಾದ್ಯತೆ: ಬಿಎಸ್ ಎಫ್

ಸುಮಾರು 36 ಸಾವಿರ ರೊಹಿಂಗ್ಯಾಗಳು ದೇಶದ ವಿವಿಧ ಭಾಗಗಳಲ್ಲಿ ಇದ್ದಾರೆ. ದೇಶದೊಳಗೆ ಅಕ್ರಮವಾಗಿ ನುಸುಳಿರುವ ಇವರು ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ .......
ಕೆ ಕೆ ಶರ್ಮಾ
ಕೆ ಕೆ ಶರ್ಮಾ
ನವದೆಹಲಿ: ಸುಮಾರು 36 ಸಾವಿರ  ರೊಹಿಂಗ್ಯಾಗಳು ದೇಶದ ವಿವಿಧ ಭಾಗಗಳಲ್ಲಿ ಇದ್ದಾರೆ. ದೇಶದೊಳಗೆ ಅಕ್ರಮವಾಗಿ ನುಸುಳಿರುವ ಇವರು  ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಸಾದ್ಯತೆಯನ್ನು  ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಗಡಿ ಭದ್ರತಾ ಪಡೆ  ಹೇಳಿದೆ.
2.5 ಲಕ್ಷ ಯೋಧರ ಪಡೆಯ ನಿರ್ದೇಶಕರಾದ ಕೆಕೆ ಶರ್ಮಾ ಅವರು ಹೇಳಿದಂತೆ ಅವರ ಪಡೆಗಳು ಈ ವರ್ಷದ ಆರಂಭದಿಂದ ಅಕ್ಟೋಬರ್ 31 ರವರೆಗೆ 87 ರೋಹಿಂಗ್ಯಾ ಮುಸ್ಲಿಮರನ್ನು ಇಂಡೋ-ಬಾಂಗ್ಲಾ ಗಡಿಯಲ್ಲಿ ಬಂಧಿಸಿವೆ ಮತ್ತು 76 ರೊಹಿಂಗ್ಯಾಗಳನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ. "ನನಗೆ ದೊರಕಿದ ಮಾಹಿತಿಯು ಅನುಸಾರ , ಸುಮಾರು 36,ಸಾವಿರ ರೊಹಿಂಗ್ಯಾಗಳು ದೇಶದ ವಿವಿಧ ಭಗಗಳಲ್ಲಿ ಇದ್ದಾರೆ.ಇದು ಕೇವಲ ಸಾಮಾನ್ಯ ಅವಲೋಕನ ಮಾತ್ರವೇ ಆಗಿದೆ" ಎಂದು  ಅವರು ಹೇಳಿದ್ದಾರೆ. ಡಿಸೆಂಬರ್ 1 ರಂದು ಬಿ ಎಸ್ ಎಫ್ ನ 52 ನೇ ರೈಸಿಂಗ್ ಡೇ ಕಾರ್ಯಕ್ರಮದ ಸಲುವಾಗಿ ನಡೆದ ಸಂವಾದದಲ್ಲಿ ಅವರು ಈ ಹೇಳಿಕೆ ನಿಡಿದ್ದಾರೆ.
"ಗಡಿ ಕಾವಲು ಪಡೆಯವರು ಇದುವರೆಗೆ ಹಿಡಿದ ಯಾವುದೇ ರೊಹಿಂಗ್ಯಾಗಳಿಂದ  ಶಸ್ತ್ರಾಸ್ತ್ರಗಳನ್ನು, ಯುದ್ಧಸಾಮಗ್ರಿ ಅಥವಾ ಭಯೋತ್ಪಾದಕ ಸಂಪರ್ಕವನ್ನು ಕುರಿತ ಅಧಿಕೃತ ಮಾಹಿತಿ ಪಡೆದಿಲ್ಲ.  ಆದರೆ , ಅವರು ಭಯೋತ್ಪಾದನೆ ಸಂಘಟನೆಗಳೊಡನೆ ಸಂಪರ್ಕ ಹೊಂದಿರುವ ಬಗೆಗೆ ಗಂಭೀರವಾದ ಆರೋಪವಿದೆ.ಇದರಲ್ಲಿ ಯಾವ ಅನುಮಾನವಿಲ್ಲ". ಶರ್ಮಾ 
"ಇತ್ತೀಚಿನ ದಿನಗಳಲ್ಲಿ 9-10 ಲಕ್ಷ ರೊಹಿಂಗ್ಯಾ ಜನರು ಮಯನ್ಮಾರ್ ನಿಂದ ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ ಅವರು ಭಾರತಕ್ಕೆ ಬರುವುದನ್ನು ತಡೆಯಬೇಕಿದೆ. ರೋಹಿಂಗ್ಯಾ ಸಮಸ್ಯೆ  ಬಹಳ ಸಂಕೀರ್ಣವಾದ ವಿಷಯವಾಗಿದೆ. ಯಾವುದೇ ಕಾನೂನುಬಾಹಿರ ಬಾಂಗ್ಲಾ ವಲಸಿಗರನ್ನು ಅಥವಾ ರೊಹಿಂಗ್ಯಾ ಗಳನ್ನು ಭಾರತದ  ಒಳಪ್ರವೇಶಿಸಲು ಬಿಡುವುದಿಲ್ಲ ಎನ್ನುವ ನಮ್ಮ ನಿಲುವು  ಬಹಳ ಸ್ಪಷ್ಟವಾಗಿದೆ," ಶರ್ಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com