ದೂರವಾಣಿ ಮೂಲಕ ಪತಿಯೊಂದಿಗೆ ಹಾದಿಯಾ ಮಾತುಕತೆ: ಸುಪ್ರೀಂಗೆ ತಂದೆ ಅಶೋಕನ್ ದೂರು

ಲವ್ ಜಿಹಾದ್ ಪ್ರಕರಣದ ಸಂತ್ರಸ್ಥೆ ಅಖಿಲಾ ಅಶೋಕನ್ (ಹಾದಿಯಾ) ಪತಿ ಜೆಹಾನ್ ಗೆ ಕರೆ ಮಾಡಿದ್ದನ್ನು ವಿರೋಧಿಸಿ ಆಕೆಯ ತಂದೆ ಅಶೋಕನ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಲವ್ ಜಿಹಾದ್ ಪ್ರಕರಣದ ಸಂತ್ರಸ್ಥೆ ಅಖಿಲಾ ಅಶೋಕನ್ (ಹಾದಿಯಾ) ಪತಿ ಜೆಹಾನ್ ಗೆ ಕರೆ ಮಾಡಿದ್ದನ್ನು ವಿರೋಧಿಸಿ ಆಕೆಯ ತಂದೆ ಅಶೋಕನ್ ಅವರು ಸುಪ್ರೀಂ ಕೋರ್ಟ್ ಗೆ ದೂರು ನೀಡಲು ಮುಂದಾಗಿದ್ದಾರೆ.
ಇತ್ತೀಚೆಗಷ್ಟೇ ತಮಿಳುನಾಡಿನ ಹೋಮಿಯೋಪತಿ ಕಾಲೇಜಿಗೆ ವ್ಯಾಸಂಗಕ್ಕಾಗಿ ತೆರಳಿದ್ದ ಹಾದಿಯಾ ತನ್ನ ಪತಿಯೊಂದಿಗೆ ದೂರವಾಣಿ ಮೂಲಕ ಮಾತನಾಡಬೇಕು ಎಂದು ಮನವಿ ಮಾಡಿದ್ದರು, ಅದರಂತೆ ಕಾಲೇಜಿನ  ಪ್ರಾಂಶುಪಾಲ ಕಣ್ಣನ್ ಅವರ ಅನುಮತಿ ಮೇರೆಗೆ ಹಾದಿಯಾ ಪತಿ ಜಿಹಾನ್ ಗೆ ಕರೆ ಮಾಡಿ ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಅಸಮಾಧಾನಗೊಂಡ ತಂದೆ  ಅಶೋಕನ್ ಅವರು ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ.
ಹಾದಿಯಾ ಉಗ್ರವಾದಿಗಳಿಂದ ದೂರವಿದ್ದು ವ್ಯಾಸಂಗ ಮಾಡಲೆಂದೇ ಸುಪ್ರೀಂ ಕೋರ್ಟ್ ಆಕೆಯನ್ನು ಸುರಕ್ಷಿತ ಪ್ರದೇಶಕ್ಕೆ ವ್ಯಾಸಂಗಕ್ಕಾಗಿ ಕಳುಹಿಸಿತ್ತು. ಆದರೆ ಕಾಲೇಜಿನಲ್ಲೂ ಆಕೆ ಜೆಹಾನ್ ನನ್ನು ದೂರವಾಣಿ ಮೂಲಕ ಸಂಪರ್ಕ  ಮಾಡಿದ್ದು, ಇದು ಆಕೆಯ ಸುರಕ್ಷತೆ ವಿಚಾರದಲ್ಲಿ ರಾಜಿ ಮಾಡಿಕೊಂಡತೆ ಕಂಡುಬರುತ್ತಿದೆ ಎಂದು ತಮ್ಮ ದೂರಿನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಅಂತೆಯೇ ಈ ಬಗ್ಗೆ ಕೂಡಲೇ ನಾನು ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ  ದಾಖಲಿಸುವುದಾಗಿಯೂ, ಜೆಹಾನ್ ಆಕೆಯನ್ನು ಭೇಟಿಯಾಗದಂತೆ, ಸಂಪರ್ಕಿಸದಂತೆ ಆದೇಶ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಜೆಹಾನ್ ಉಗ್ರ ಸಂಘಟನೆಗಳೊಂದಿಗೆ ಉತ್ತಮ ಸಂಪರ್ಕವಿದ್ದು, ಪ್ರಸ್ತುತ ನಡೆಯುತ್ತಿರುವ ಘಟನೆಗಳು ನನ್ನ ಇಡೀ ಹೊರಾಟವನ್ನೇ ಸ್ಥಗಿತಗೊಳಿಸುವಂತೆ ಕಾಣಿಸುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಿನ್ನೆಯಷ್ಟೇ ಹೋಮಿಯೋಪತಿ ಕಾಲೇಜು ಪ್ರಾಂಶುಪಾಲರಾದ ಕಣ್ಣನ್ ಅವರು, ಹಾದಿಯಾ ತಮ್ಮ ಅನುಮತಿ ಮೇರೆಗೆ ಮಾತ್ರ ಪತಿ ಅಥವಾ ಇನ್ನಾರನ್ನಾದರೂ ಭೇಟಿ ಮಾಡಬಹುದು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com