ಧಾರ್ಮಿಕ ಅಂಶಗಳ ಮೇಲೆ ದೇಶ ಇಬ್ಭಾಗವಾಗಬಾರದು: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ

ಧಾರ್ಮಿಕ ಅಂಶಗಳ ಮೇಲೆ ಆಧಾರದ ಮೇಲೆ ದೇಶ ಇಬ್ಭಾಗವಾಗಬಾರದು ಎಂದು ಅಮೆರಿದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಹಿಂದೂಸ್ತಾನ್-ಟೈಮ್ಸ್ ಲೀಡರ್ಶಿಪ್ ಸಮಿತ್ ನಲ್ಲಿ ಪಾಲ್ಗೊಂಡಿದ್ದ ಒಬಾಮ
ಹಿಂದೂಸ್ತಾನ್-ಟೈಮ್ಸ್ ಲೀಡರ್ಶಿಪ್ ಸಮಿತ್ ನಲ್ಲಿ ಪಾಲ್ಗೊಂಡಿದ್ದ ಒಬಾಮ
ನವದೆಹಲಿ: ಧಾರ್ಮಿಕ ಅಂಶಗಳ ಮೇಲೆ ಆಧಾರದ ಮೇಲೆ ದೇಶ ಇಬ್ಭಾಗವಾಗಬಾರದು ಎಂದು ಅಮೆರಿದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಹಿಂದೂಸ್ತಾನ್-ಟೈಮ್ಸ್ ಲೀಡರ್ ಷಿಪ್ ಸಮಿತ್ ನಲ್ಲಿ ಪಾಲ್ಗೊಂಡಿದ್ದ ಅಮೆರಿಕ ಮಾಜಿ ಅಧ್ಯಕ್ಷ ಒಬಾಮ ಅವರು, ತಾವು ತಮ್ಮ ಭಾರತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದೇವೆ.  ಈ ವೇಳೆ ಧಾರ್ಮಿಕ ಅಂಶಗಳ ಮೇಲೆ ಆಧಾರದ ಮೇಲೆ ದೇಶ ಇಬ್ಭಾಗವಾಗಬಾರದು ಎಂಬುದನ್ನು ಪ್ರಧಾನಿ ಮೋದಿ ಅವರಿಗೆ ಮನವವರಿಕೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು.
"ಯಾವುದೇ ದೇಶವಿರಲಿ.. ಅದು ಧಾರ್ಮಿಕ ಅಂಶಗಳ ಆಧಾರದ ಮೇಲೆ ಇಬ್ಭಾಗವಾಗಬಾರದು. ಈ ಬಗ್ಗೆ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದಲ್ಲಿರುವ ಭಾರತೀಯರೊಂದಿಗೆ ಚರ್ಚಿಸಿದ್ದೇನೆ. ಧಾರ್ಮಿಕ ವಿಚಾರಗಳಿಗೆ  ಸಂಬಂಧಿಸಿದಂತೆ ಜನರು ಸಾಮಾನ್ಯವಾಗಿ ತಮ್ಮಲ್ಲಿನ ಭಿನ್ನತೆಗಳನ್ನೇ ಮೊದಲು ಗುರುತಿಸುತ್ತಾರೆ. ಇದು ಉತ್ತಮ ಸಂವಹನ ಸಂಪರ್ಕಕ್ಕೆ ತಡೆಯುಂಟು ಮಾಡುತ್ತದೆ. ಭಿನ್ನತೆಗಳೇನಿದ್ದರೂ ನಮ್ಮ ಲಿಂಗಾಧಾರಿತವಾಗಿರಬೇಕೇ  ಹೊರತು ಧರ್ಮಾಧಾರಿತವಾಗಿರಬಾರದು ಎಂದು ಒಬಾಮ ಕಿವಿಮಾತು ಹೇಳಿದ್ದಾರೆ.
ಬಹುಸಂಖ್ಯಾತ ಹಿಂದೂಗಳು, ಸರ್ಕಾರ ಅಲ್ಪಸಂಖ್ಯಾತರನ್ನು ಉತ್ತೇಜಿಸಬೇಕು
ಅಂತೆಯೇ ಈ ದೇಶದ ಬಹು ಸಂಖ್ಯಾತರು ಮತ್ತು ಕೇಂದ್ರ ಸರ್ಕಾರ ಅಲ್ಪಸಂಖ್ಯಾತರಾದ ಅದರಲ್ಲೂ ಪ್ರಮುಖವಾಗಿ ಮುಸ್ಲಿಮರು ತಮ್ಮನ್ನು ತಾವು ಭಾರತೀಯರು ಎಂದು ಹೆಮ್ಮೆ.ಯಿಂದ ಹೇಳಿಕೊಳ್ಳಬೇಕು. ಆ ರೀತಿಯ ಅವರನ್ನು  ಉತ್ತೇಜಿಸಬೇಕು. ಭಾರತದಲ್ಲಿ ಮುಸ್ಲಿಂ ಸಮುದಾಯ ಮತ್ತು ಮುಸ್ಲಿಂ ಜನಸಂಖ್ಯೆ ಯಶಸ್ವಿಯಾಗಿದೆ. ಭಾರತೀಯ ಮುಸ್ಲಿಮರು  ತಮ್ಮನ್ನು ತಾವು ಮುಸ್ಲಿಮರು ಎಂದು ಪರಿಗಣಿಸುವುದಕ್ಕಿಂತ ತಾವು ಭಾರತೀಯರು ಎಂದು  ಹೇಳಿಕೊಳ್ಳಲು ಇಷ್ಟಪಡುತ್ತಾರೆ. ಹೀಗಾಗಿ ಇದು ಸರ್ಕಾರದ ಕೆಲಸ ಮಾತ್ರವಲ್ಲ. ಇದು ನಾಗರೀಕರ ಕರ್ತವ್ಯ ಕೂಡ ಆಗಿದ್ದು, ಜನ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು. ತಾವು ಯಾವ ಸಿದ್ಧಾಂತವನ್ನು ಒಪ್ಪಿಕೊಳ್ಳುತ್ತಿದ್ದೇವೆ ಮತ್ತು  ಯಾವ ಸಿದ್ಧಾಂತವನ್ನು ಪ್ರಚುರ ಪಡಿಸುತ್ತಿದ್ದೇವೆ ಎಂಬುದರ ಬಗ್ಗೆ ಮೊದಲು ಚಿಂತಿಸಬೇಕು ಎಂದು ಹೇಳಿದರು.
ಅಂತೆಯೇ ರಾಜಕಾರಣಿಗಳು ಜನಪ್ರತಿನಿಧಿಗಳಾಗಿದ್ದು, ನಾವು ಅವರ ಬಳಿ ನಮಗೆ ಇದು ಬೇಕು ಎಂದು ಹೇಳುವ ಧೈರ್ಯ ತೋರಬೇಕು. ಆಗ ಮಾತ್ರ ಅವರು ಅವರು ನಿಮ್ಮ ಕೆಲಸಗಳತ್ತ ಗಮನ ಹರಿಸುತ್ತಾರೆ. ರಾಜಕಾರಣಿಗಳು  ಕನ್ನಡಿ ಇದ್ದಂತೆ..ಅವರು ಸಮುದಾಯದ ಆಲೋಚನೆಗಳನ್ನು ಬಿಂಬಿಸುತ್ತಾರೆ. ಇಡೇ ದೇಶದ ಜನ ಒಗ್ಗೂಡಿ ತಾವು ಧಾರ್ಮಿಕ ಇಬ್ಭಾಗದ ವಿರೋಧಿಗಳು ಎಂದು ಹೇಳಿದರೆ, ಆ ವಿಚಾರಕ್ಕೆ ರಾಜಕಾರಣಿಗಳು ತಲೆಕೂಡ ಹಾಕುವುದಿಲ್ಲ  ಎಂದು ಒಬಾಮ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com