ಮಹಾತ್ಮ ಗಾಂಧಿ, ಮೋದಿ ಸಾಕಾಗಲ್ಲ, ಸ್ವಚ್ಛ ಭಾರತಕ್ಕೆ 125 ಕೋಟಿ ಭಾರತೀಯರ ಅಗತ್ಯವಿದೆ: ಪ್ರಧಾನಿ ಮೋದಿ

ಸ್ವಚ್ಛ ಭಾರತ ಕನಸಿಗೆ ರಾಷ್ಟ್ರಪಿತ ಮಹಾತ್ಮಗಾಂಧಿ, ಮೋದಿಯಷ್ಟೇ ಸಾಕಾಗುವುದಿಲ್ಲ. 125 ಕೋಟಿ ಭಾರತೀಯರ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on

ನವದೆಹಲಿ: ಸ್ವಚ್ಛ ಭಾರತ ಕನಸಿಗೆ ರಾಷ್ಟ್ರಪಿತ ಮಹಾತ್ಮಗಾಂಧಿ, ಮೋದಿಯಷ್ಟೇ ಸಾಕಾಗುವುದಿಲ್ಲ. 125 ಕೋಟಿ ಭಾರತೀಯರ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ. 

ಸ್ವಚ್ಛ ಭಾರತ ಅಭಿಯಾನಕ್ಕೆ ಮೂರು ವರ್ಷ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಮಾತನಾಡಿರುವ ಅವರು, 125 ಕೋಟಿ ಭಾರತೀಯರು ಸ್ವಚ್ಛ ಭಾರತ ಅಭಿಯಾನವನ್ನು ಹೃದಯದಿಂದ ಒಪ್ಪಿಕೊಂಡಿದ್ದಾರೆ. ಸ್ವಚ್ಛ ಭಾರತದ ಅಭಿಯಾನ ಇದೀಗ ಜನರ ಅಭಿಯಾನವಾಗಿದೆ. 1000 ಮಹಾತ್ಮ ಗಾಂಧಿ, 1 ಲಕ್ಷ ನರೇಂದ್ರ ಮೋದಿ, ಎಲ್ಲಾ ಮುಖ್ಯಮಂತ್ರಿಗಳು ಹಾಗೂ ಎಲ್ಲಾ ಸರ್ಕಾರಗಳು ಒಟ್ಟಿಗೆ ಸೇರಿದರೂ ಸ್ವಚ್ಛ ಭಾರತದ ಕನಸು ನನಸಾಗುವುದಿಲ್ಲ. ಸ್ವಚ್ಛ ಭಾರತದ ಕನಸು ನನಸಾಗಬೇಕಾದರೆ 125 ಕೋಟಿ ಭಾರತೀಯರೂ ಕೈಜೋಡಿಸಬೇಕು ಎಂದು ಹೇಳಿದ್ದಾರೆ. 

ಭಾರತ ಸಾಕಷ್ಟು ಸಮಸ್ಯೆ ಹಾಗೂ ಸವಾಲನ್ನು ಎದುರಿಸುತ್ತಿದೆ. ಅದರ ಅರ್ಥ ಆ ಸವಾಲು ಹಾಗೂ ಸಮಸ್ಯೆಗಳಿಂದ ಓಡಿಹೋಗುತ್ತಿದೆ ಎಂದಲ್ಲ. ಆ ಸಮಸ್ಯೆ ಹಾಗೂ ಸವಾಲುಗಳನ್ನು ನಾವು ಎದುರಿಸಲು ಸಿದ್ಧರಿದ್ದೇವೆ ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಸ್ವಚ್ಛ ಭಾರತ ಅಭಿಯಾನದಿಂದ ಧನಾತ್ಮಕ ಸ್ಪರ್ಧೆಗಳು ಉಂಟಾಗಿದೆ. ಸ್ವಚ್ಛತೆಯ ಶ್ರೇಯಾಂಕದೊಂದಿಗೆ ನಾವು ಇದನ್ನು ನೋಡುತ್ತಿದ್ದೇವೆ. ಸಂಘಟನೆಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿವೆ ಎಂಬುದನ್ನು ನೋಡುತ್ತಿದ್ದೇವೆ. 

ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದಾಗ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೆವು. ಇದೀಗ ಸ್ವಚ್ಛ ಭಾರತ ಅಭಿಯಾನಕ್ಕೆ 3 ವರ್ಷಗಳು ಪೂರ್ಣಗೊಂಡಿದೆ. ಸ್ವಚ್ಛ ಭಾರತ ಕುರಿತ ಪ್ರಗತಿಗಳ ಕುರಿತು ನಮಗೆ ಅರಿವಿದೆ. ಭಾರತ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಇದರ ಅರ್ಥ ನಾವು ಓಡಿ ಹೋಗುತ್ತೇವೆಂದು ಅಲ್ಲ. ಎಲ್ಲಾ ಸವಾಲುಗಳನ್ನು ಎದುರಿಸುತ್ತೇವೆ ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆಂದು ತಿಳಿಸಿದ್ದಾರೆ.

ಇದೇ ವೇಳೆ ಮಾಧ್ಯಮಗಳನ್ನು ಕೊಂಡಾಡಿರುವ ಅವರು, ಕೇಂದ್ರ ಸರ್ಕಾರ ಸ್ವಚ್ಛತೆಯ ಅಭಿಯಾನದಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವನ್ನುವಹಿಸಿವೆ. ಸ್ವಚ್ಛ ಭಾರತಕ್ಕೆ ವಿರೋಧ ವ್ಯಕ್ತಪಡಿಸುವವರನ್ನು ಬಹಿರಂಗ ಪಡಿಸಿದೆ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com