ಇಂದು ವಿಜಯವಾಡದಲ್ಲಿ ಕೆಲ ರಾಷ್ಟ್ರೀಯ ಹೆದ್ದಾರಿಯ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ವೆಂಕಯ್ಯ ನಾಯ್ಡು ಅವರು, ಆಂಧ್ರಪ್ರದೇಶದಲ್ಲಿ ನೌಕರಿ ಪಡೆಯಲು ಕಡ್ಡಾಯವಾಗಿ ತೆಲುಗು ಗೊತ್ತಿರಬೇಕು ಮತ್ತು ಶಾಲೆಗಳಲ್ಲಿ ಮಾಧ್ಯಮದ ಹೊರತಾಗಿಯೂ ಎಲ್ಲಾ ವಿದ್ಯಾರ್ಥಿಗಳಿಗೆ ತೆಲುಗು ಕಡ್ಡಾಯಗೊಳಿಸಬೇಕು ಎಂದು ಹೇಳಿದ್ದಾರೆ.