ಹೋಟೆಲ್ ಗುತ್ತಿಗೆ ಅಕ್ರಮವನ್ನು ಆರೋಪ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಬಿಐ ನ್ಯಾಯಾಲಯ ಈ ಹಿಂದೆ ಪ್ರಕರಣ ಸಂಬಂಧ ಸೆ.11-12 ರಂದು ವಿಚಾರಣೆಗೆ ಹಾಜರಾಗುವಂತೆ ಲಾಲೂ ಹಾಗೂ ಅವರ ಪುತ್ರ ತೇಜಸ್ವಿ ಯಾದವ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.
ಸಿಬಿಐ ಸಮನ್ಸ್ ಜಾರಿ ಮಾಡಿದ್ದರೂ, ಲಾಲೂ ಹಾಗೂ ತೇಜಸ್ವಿ ಅವರು ವಿಚಾರಣೆ ಹಾಜರಾಗಿರಲಿಲ್ಲ. ಇದೀಗ ಮತ್ತೆ ಇಬ್ಬರಿಗೂ ಸಮನ್ಸ್ ಜಾರಿ ಮಾಡಿರುವ ಸಿಬಿಐ ನ್ಯಾಯಾಲಯ ಅಕ್ಟೋಬರ್. 4-5 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಆರ್'ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ರೈಲ್ವೇ ಸಚಿವರಾಗಿದ್ದಾಗ 2 ಹೋಟೆಲ್ ಗಳನ್ನು ಖಾಸಗಿಯವರಿಗೆ ನೀಡಿದ್ದರಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದಲ್ಲಿ ಲಾಲು, ಅವರ ಪತ್ನಿ ರಾಬ್ಡಿದೇವಿ ಮತ್ತು ಪುತ್ರ, ಬಿಹಾರ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಸಿಬಿಐ ಜುಲೈ.7ರಂದು ಪ್ರಕರಣ ದಾಖಲಿಸಿಕೊಂಡಿತ್ತು.