ಮೀರತ್: ಪ್ರಧಾನಿ ನರೇಂದ್ರ ಮೋದಿ ಅವರ 100 ಅಡಿ ಎತ್ತರದ ಪ್ರತಿಮೆಯೊಂದಿಗೆ ಮೀರತ್ ನ ಸಾರ್ಧಾನಾ ಪ್ರದೇಶದಲ್ಲಿ ದೇವಾಲಯವೊಂದು ನಿರ್ಮಾಣವಾಗಲಿದೆ. .ಉತ್ತರ ಪ್ರದೇಶದ ಜಲ ಇಲಾಖೆಯ ನಿವೃತ್ತ ಸಹಾಯಕ ಎಂಜಿನಿಯರ್ ಜೆಪಿ ಸಿಂಗ್ ಅವರು ಮೋದಿ ಪ್ರತಿಮೆಯನ್ನು ಅನಾವರಣಗೊಳಿಸುವುದಾಗಿ ಹೇಳಿದ್ದು ಇದಕ್ಕೆ ಸುಮಾರು 10 ಕೋಟಿ ವೆಚ್ಚವಾಗಲಿದೆ. .ಮೋದಿ ಮಂದಿರ ನಿರ್ಮಾಣಕ್ಕಾಗಿ ಮೀರತ್-ಕರ್ನಲ್ ಹೆದ್ದಾರಿಯಲ್ಲಿ 5 ಎಕರೆ ಜಮೀನನ್ನು ಖರೀದಿಸಲಾಗಿದ್ದು ಅಕ್ಟೋಬರ್ 23ರಂದು ಭೂಮಿ ಪೂಜೆ ನೆರವೇರಲಿದೆ ಎಂದು ಹೇಳಿದರು. .2015ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೊಟ್ಟಮೊದಲ ದೇವಾಲಯ ಗುಜರಾತಿನ ರಾಜ್ ಕೋಟ್ ನಲ್ಲಿ ನಿರ್ಮಾಣಗೊಂಡಿತ್ತು..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics