ಸಮಾಜವಾದಿ ಪಕ್ಷದ ನಾಯಕ ಅಜಂಖಾನ್
ದೇಶ
ತಾಜ್'ಮಹಲ್ ಧ್ವಂಸಗೊಳಿಸಿದರೆ ಸಿಎಂ ಯೋಗಿಯನ್ನು ಬೆಂಬಲಿಸುತ್ತೇವೆ: ಅಜಂಖಾನ್
ಪ್ರೀತಿಯ ಸಂಕೇತವೆಂದೇ ಹೇಳಲಾಗುವ ವಿಶ್ವವಿಖ್ಯಾತ ತಾಜ್'ಮಹಲ್'ನ್ನು ಧ್ವಂಸಗೊಳಿಸಿದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ...
ಲಖನೌ: ಪ್ರೀತಿಯ ಸಂಕೇತವೆಂದೇ ಹೇಳಲಾಗುವ ವಿಶ್ವವಿಖ್ಯಾತ ತಾಜ್'ಮಹಲ್'ನ್ನು ಧ್ವಂಸಗೊಳಿಸಿದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆಂದು ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರು ಬುಧವಾರ ಹೇಳಿದ್ದಾರೆ.
ಪ್ರವಾಸೋದ್ಯಮ ಸಚಿವೆ ರಿತಾ ಬಹುಗುಣ ಅವರು ಇತ್ತೀಚೆಗಷ್ಟೇ ಕೈಪಿಡಿಯೊಂದನ್ನು ಬಿಡುಗಡೆಗೊಳಿಸಿದ್ದರು. ಈ ಕೈಪಿಡಿಯಲ್ಲಿ ಉತ್ತರಪ್ರದೇಶದ ಎಲ್ಲಾ ಪ್ರಮುಖ ಪ್ರವಾಸೋದ್ಯಮ ತಾಣಗಳನ್ನು ಉಲ್ಲೇಖಿಸಲಾಗಿದೆ. ಗೋರಖ್ಪುರದ ದೇವಸ್ತಾನ, ಕೆಲವು ಪಾರಂಪರಿಕ ತಾಣಗಳು, ರಾಮಾಯಣದ ಪೌರಾಣಿಕ ತಾಣಗಳ ಬಗ್ಗೆಯೂ ಕರಪತ್ರದಲ್ಲಿ ಬರೆಯಲಾಗಿದ್ದು, ಪಟ್ಟಿದಲ್ಲಿ ವಿಶ್ವಪ್ರಸಿದ್ಧ ಉತ್ತರಪ್ರದೇಶದ ಆಗ್ರ ಪ್ರವಾಸೀ ತಾಣವಾದ ತಾಜ್ ಮಹಲ್ ಹೆಸರನ್ನೇ ಉಲ್ಲೇಖಿಸದಿರುವುದರಿಂದ ವಿವಾದ ಸೃಷ್ಟಿಯಾಗಿದೆ.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಜಂ ಖಾನ್ ಅವರು, ವಿಶ್ವದ ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್'ನ್ನು ಧ್ವಂಸಗೊಳಿಸಿದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರವನ್ನು ಬೆಬಲಿಸುತ್ತೇನೆಂದು ಹೇಳಿದ್ದಾರೆ, ಅಲ್ಲದೆ, ಕೆಂಪುಕೋಟೆ, ತಾಜ್'ಮಹಲ್, ಕುತುಬ್ ಮಿನಾರ್ ನ್ನು ಗುಲಾಮಗಿರಿಯ ಸಂಕೇತವಾಗಿದೆ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ