ಮುಂಬೈ ಕಾಲ್ತುಳಿತ: ನಮ್ಮ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ಮುಂದಿನ ಹೋರಾಟ ಶಾಂತಿಯುತವಾಗಿರಲ್ಲ- ರಾಜ್ ಠಾಕ್ರೆ ಎಚ್ಚರಿಕೆ

23 ಜನರನ್ನು ಬಲಿಪಡೆದುಕೊಂಡಿದ್ದ ಮುಂಬೈ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೇ ಇಲಾಖೆ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆ ಗುರುವಾರ...
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ
ಮುಂಬೈ: 23 ಜನರನ್ನು ಬಲಿಪಡೆದುಕೊಂಡಿದ್ದ ಮುಂಬೈ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೇ ಇಲಾಖೆ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆ ಗುರುವಾರ ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿದೆ. 
ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಪ್ರತಿಭಟನೆ ನಡೆಸುತ್ತಿದೆ. 
ಪ್ರತಿಭಟನೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಯವರು, ನಮ್ಮ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸದೇ ಹೋದಲ್ಲಿ, ನಮ್ಮ ಮುಂದಿನ ಹೋರಾಟ ಶಾಂತಿಯುತವಾಗಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. 
ನಿಜವಾದ ಸಮಸ್ಯೆಗಳ ಕುರಿತಂತೆ ಗಮನಹರಿಸುವುದನ್ನು ಬಿಟ್ಟು ಸರ್ಕಾರ ನೋಟು ನಿಷೇಧ, ಸ್ವಚ್ಛ ಭಾರತ ಅಭಿಯಾನ, ಯೋಗ ಹಾಗೂ ಜಿಎಸ್'ಟಿಯಂತಹ ವಿಚಾರಗಳ ಬಗ್ಗೆ ಗಮನ ಹರಿಸುತ್ತಿದೆ. ಗುಜರಾತ್ ಅಭಿವೃದ್ಧಿ ಕುರಿತಂತೆ ತಪ್ಪು ಮಾಹಿತಿಗಳನ್ನು ನೀಡಲಾಗುತ್ತಿದೆ. ರೈತಲ ಸಾಲಗಳು ಈಗಲೂ ಮನ್ನಾ ಆಗಿಲ್ಲ. ಬುಲೆಟ್ ರೈಲಿನಿಂದ ಯಾರಿಗೆ ಲಾಭವಾಗುತ್ತದೆ?...
ಬುಲೆಟ್ ರೈಲಿಗೆ ಸುರೇಶ್ ಪ್ರಭು ಅವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ರೈಲ್ವೆಯಲ್ಲಿ ಸಮಸ್ಯೆಗಳು ಉದ್ಭವಿಸಿರುವುದು ಇದು ಮೊದಲೇನಲ್ಲ. ನಂಬಿಕೆ ಇಡ ವ್ಯಕ್ತಿ ಮೋಸ ಮಾಡಿದರೆ, ಅದನ್ನು ಸಹಿಸಿಕೊಳ್ಳಬಹುದು. ಆದರೆ, ನಂಬಿಕೆ ಇಟ್ಟಿರುವಂತಹ ವ್ಯಕ್ತಿ ಮೋಸ ಮಾಡಿದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಸರ್ಕಾರ ಮೊದಲು ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲದೇ ಹೋದರೆ, ಎಂಎನ್ಎಸ್ ಕಾರ್ಯಕರ್ತರು ಬೀದಿಗಿಳಿಯುತ್ತಾರೆ. ಮುಂದೆ ಸಂಭವಿಸುವ ಸಮಸ್ಯೆಗಳ ಜವಾಬ್ದಾರಿಯನ್ನು ಯಾರು ಹೊತ್ತುಕೊಳ್ಳುತ್ತಾರೆಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com