ನವದೆಹಲಿ: ಇಂದಿನ ಆಧುನಿಕ ಯುಗದಲ್ಲಿ ಎಲ್ಲರ ಕೈನಲ್ಲಿ ಮೊಬೈಲ್ ಗಳಿವೆ. ಬಹುತೇಕರೆಲ್ಲರೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡುವವರೇ ಆಗಿದ್ದಾರೆ. ಆದರೆ ಇದೇ ಸೆಲ್ಫಿ ಹಲವಾರು ಜೀವಗಳ ಪ್ರಾಣ ಹಾನಿಗೆ ಕಾರಣವಾಗಿದೆ. ಹೀಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವಿಗೀದಾದವರ ಪಟ್ಟಿಯಲ್ಲಿ ಭಾರತೀಯರೇ ಅಗ್ರ ಪಂಕ್ತಿಯಲ್ಲಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ.