ಔಷಧ ಉತ್ಪನ್ನಗಳಿಗೆ ಭಾರತ 2 ನೇ ಅತಿ ದೊಡ್ದ ಮಾರುಕಟ್ಟೆ: ವರದಿ
ಔಷಧ ಉತ್ಪನ್ನಗಳಿಗೆ ಭಾರತ 2 ನೇ ಅತಿ ದೊಡ್ದ ಮಾರುಕಟ್ಟೆ: ವರದಿ

ಔಷಧ ಉತ್ಪನ್ನಗಳಿಗೆ ಭಾರತ 2 ನೇ ಅತಿ ದೊಡ್ದ ಮಾರುಕಟ್ಟೆ: ವರದಿ

ಜೈವಿಕ ತಂತ್ರಜ್ಞಾನ ಹಾಗೂ ಜಾಗತಿಕ ಔಷಧ ಕ್ಷೇತ್ರದಲ್ಲಿನ ಉದ್ಯೋಗಗಳಿಗೆ ಶೇ.13.7 ರಷ್ಟು ಕೊಡುಗೆ ನೀಡಿರುವ ಭಾರತ ಔಷಧ ಉತ್ಪನ್ನಗಳಿಗೆ ವಿಶ್ವದಲ್ಲಿ 2 ನೇ ಮಾರುಕಟ್ಟೆಯಾಗಿದೆ ಎಂದು ನೆಟ್ವರ್ಕಿಂಗ್ ಕ್ಷೇತ್ರದ...
Published on
ನವದೆಹಲಿ: ಜೈವಿಕ ತಂತ್ರಜ್ಞಾನ ಹಾಗೂ ಜಾಗತಿಕ ಔಷಧ ಕ್ಷೇತ್ರದಲ್ಲಿನ ಉದ್ಯೋಗಗಳಿಗೆ ಶೇ.13.7 ರಷ್ಟು ಕೊಡುಗೆ ನೀಡಿರುವ ಭಾರತ ಔಷಧ ಉತ್ಪನ್ನಗಳಿಗೆ ವಿಶ್ವದಲ್ಲಿ 2 ನೇ ಮಾರುಕಟ್ಟೆಯಾಗಿದೆ ಎಂದು ನೆಟ್ವರ್ಕಿಂಗ್ ಕ್ಷೇತ್ರದ ಅಗ್ರಗಣ್ಯ ಲಿಂಕ್ಡ್ ಇನ್ ವರದಿ ಹೇಳಿದೆ. 
ದಿ ಇಂಡಿಯನ್ ಫಾರ್ಮಾ ಆಂಡ್ ಬಯೋಟೆಕ್ ಇಂಡಸ್ಟ್ರಿ ಎಂಬ ಇ-ಪುಸ್ತಕದಲ್ಲಿ ನೀಡಿರುವ ವರದಿಯ ಪ್ರಕಾರ  ನವದೆಹಲಿ, ಕೋಲ್ಕತ್ತಾ, ಚಂಡೀಗಢ ಔಷಧಿ ಉತ್ಪನ್ನಗಳ ವಲಯದಲ್ಲಿ ಅತಿ ಹೆಚ್ಚು ಅಭಿವೃದ್ಧಿಯಾಗುತ್ತಿರುವ ರಾಜ್ಯಗಳಾಗಿದ್ದು, ಅಮೆರಿಕಾಗೆ ಹೆಚ್ಚಿನ ಪ್ರತಿಭೆಗಳು ಪಲಾಯನವಾಗುತ್ತಿವೆ ಎಂದು ತಿಳಿದುಬಂದಿದೆ. 
ಅಮೆರಿಕಾದ ಫಾರ್ಮಾ ಹಾಗೂ ಬಯೋ ಟೆಕ್ ಇಂಡಸ್ಟ್ರಿಯಲ್ಲಿನ ಶೇ.48 ರಷ್ಟು ಪ್ರತಿಭೆಗಳು ಭಾರತಕ್ಕೆ ಬರುತ್ತಿದ್ದು, ಭಾರತದಿಂದ ಅಮೆರಿಕಾಗೆ ಶೇ.36 ರಷ್ಟು ಪ್ರತಿಭೆಗಳು ಹೋಗುತ್ತಿವೆ ಎಂದು ಲಿಂಕ್ಡ್ ಇನ್ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ. 
ಸಂಶೋಧಕರು, ವಿಜ್ಞಾನಿಗಳು, ಗುಣಮಟ್ಟ ಪರೀಕ್ಷೆ ನಡೆಸುವ ವೃತ್ತಿಪರರು ಸೇರಿದಂತೆ ಪ್ರಮುಖ ಪ್ರತಿಭೆಗಳು ಬೇರೆ ದೇಶಗಳಿಗೆ ತೆರಳುತ್ತಿದ್ದರೆ, ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ವಿಭಾಗದ ಪ್ರತಿಭೆಗಳು ಬರುತ್ತಿವೆ ನಂತರದ ಸ್ಥಾನದಲ್ಲಿ ಸಂಶೋಧಕರು, ವಿಜ್ಞಾನಿಗಳು, ಗುಣಮಟ್ಟ ಪರೀಕ್ಷೆ ನಡೆಸುವ ವೃತ್ತಿಪರರು ಸೇರಿದಂತೆ ಪ್ರಮುಖ ಪ್ರತಿಭೆಗಳು ಬರುತ್ತಿದ್ದಾರೆ ಎಂದು ವರದಿ ಹೇಳಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com