ಕೇರಳದಲ್ಲಿ ರಹಸ್ಯ ಉಗ್ರ ಕ್ಯಾಂಪ್ ಪ್ರಕರಣ: ಓರ್ವ ಶಂಕಿತನ ಬಂಧನ

ಕೇರಳ ರಾಜ್ಯದಲ್ಲಿ ರಹಸ್ಯವಾಗಿ ಉಗ್ರ ಕ್ಯಾಂಪ್ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮಂಗಳವಾರ ಓರ್ವ ಶಂಕಿತನನ್ನು ಬಂಧನಕ್ಕೊಳಪಡಿಸಿದೆ ಎಂದು ತಿಳಿದುಬಂದಿದೆ...
ಎನ್ಐಎ ಕಚೇರಿ (ಸಂಗ್ರಹ ಚಿತ್ರ)
ಎನ್ಐಎ ಕಚೇರಿ (ಸಂಗ್ರಹ ಚಿತ್ರ)
ನವದೆಹಲಿ: ಕೇರಳ ರಾಜ್ಯದಲ್ಲಿ ರಹಸ್ಯವಾಗಿ ಉಗ್ರ ಕ್ಯಾಂಪ್ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮಂಗಳವಾರ ಓರ್ವ ಶಂಕಿತನನ್ನು ಬಂಧನಕ್ಕೊಳಪಡಿಸಿದೆ ಎಂದು ತಿಳಿದುಬಂದಿದೆ. 
ಅಝರುದ್ದೀನ್ ಅಕಾ ಅಝರ್ (24) ಬಂಧಿತ ವ್ಯಕ್ತಿಯೆಂದು ಗುರ್ತಿಸಲಾಗಿದ್ದು, ಈದ ಕೇರಳದ ನರಥ್ ನಿವಾಸಿಯಾಗಿದ್ದಾನೆ. 
ಖಚಿತ ಮಾಹಿತಿ ಮೇರೆಗೆ ಅಝರ್ ನನ್ನು ಸೋಮವಾರ ತಡರಾತ್ರಿ ಬಂಧನಕ್ಕೊಳಪಡಿಸಲಾಯಿತು. ಶೀಘ್ರದಲ್ಲಿಯೇ ಎರ್ನಾಕುಲಂನಲ್ಲಿರುವ ವಿಚಾರಣಾಧೀನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ. 
ಪ್ರಸ್ತುತ ಬಂಧನಕ್ಕೊಳಗಾಗಿರುವ ವ್ಯಕ್ತಿ ಏ.23, 2013ರಲ್ಲಿ ಬೆಳಕಿಗೆ ಬಂದಿದ್ದ ರಹಸ್ಯ ಉಗ್ರ ಕ್ಯಾಂಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com