ದೆಹಲಿಯಿಂದ ಕೇವಲ 750 ಕಿ.ಮೀ ದೂರದಲ್ಲಿ ಪಾಕ್ ನಿಂದ ವಿನಾಶಕಾರಿ ಅಣ್ವಸ್ತ್ರ ಸುರಂಗ ಗೋದಾಮು!

ಮನುಕುಲಕ್ಕೆ ವಿನಾಶಕಾರಿಯಾಗಿರುವ 140 ಅಣ್ವಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನ ಅವುಗಳನ್ನು ಸುರಕ್ಷಿತವಾಗಿಡುವ ಸಲುವಾಗಿ ರಾಜಧಾನಿ ದೆಹಲಿಯಿಂ ಕೇವಲ 750 ಕಿ.ಮೀ ದೂರದಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮನುಕುಲಕ್ಕೆ ವಿನಾಶಕಾರಿಯಾಗಿರುವ 140 ಅಣ್ವಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನ ಅವುಗಳನ್ನು ಸುರಕ್ಷಿತವಾಗಿಡುವ ಸಲುವಾಗಿ ರಾಜಧಾನಿ ದೆಹಲಿಯಿಂ ಕೇವಲ 750 ಕಿ.ಮೀ ದೂರದಲ್ಲಿ ಭೂಗತ ಸುರಂಗಗಳನ್ನು ನಿರ್ಮಿಸುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 


ಅಮೃತಸರದಿಂದ 350 ಕಿ.ಮೀ ದೂರದಲ್ಲಿನ ಮಿಯನ್'ವಾಲಿ ಎಂಬಲ್ಲಿ 3 ಭೂಗತ ಸುರಂಗಗಳನ್ನು ಪಾಕಿಸ್ತಾನ ನಿರ್ಮಿಸುತ್ತಿದೆ ಎಂದು ಹೇಳಲಾಗುತ್ತಿದೆ. 

10 ಮೀಟರ್ ಎತ್ತರ ಮತ್ತು 10 ಮೀಟರ್ ಅಗಲದ ಒಟ್ಟು 3 ಭೂಗತ ಸುರಂಗಗಳನ್ನು ಪರಸ್ಪರ ಸಂಪರ್ಕಿಸುವ ವ್ಯವಸ್ಥೆಯನ್ನೂ ಹೊಂದಿವೆ. ಪ್ರಸ್ತುತ ನಿರ್ಮಾಣ ಮಾಡಲಾಗುತ್ತಿರುವ ಈ ಸುರಂಗಗಳನ್ನು ತಲುವುದಕ್ಕೆ ಅಗವಾದ ರಸ್ತೆಗಳನ್ನೂ ನಿರ್ಮಿಸುತ್ತಿರುವ ಪಾಕಿಸ್ತಾನ, ಅಣ್ವಸ್ತ್ರಗಳನ್ನು ಸುರಂಗಗಳಿಂದ ಹೊರ ತಂದು ಅವುಗಳನ್ನು ಬೇಕಾದ ಸ್ಥಳಕ್ಕೆ ಸಾಗಿಸುವುದಕ್ಕೆ ಈ ರಸ್ತೆಗಳು ನಿರ್ಣಾಯಕ ಪಾತ್ರವಹಿಸಲಿದೆ ಎಂದು ತಿಳಿದುಬಂದಿದೆ. 

3 ಸುರಂಗಗಳು ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಹೊಂದಿದ್ದು, ಸುರಂಗಗಳಲ್ಲಿ ಕನಿಷ್ಟ 12 ರಿಂದ 24 ಅಣ್ವಸ್ತ್ರಗಳನ್ನು ಗೋದಾಮಿನಲ್ಲಿ ಇಡಬಹುದಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಅಣ್ವಸ್ತ್ರಗಳನ್ನು ಸಂಗ್ರಹಿಸಿಡುವ ಹಿನ್ನಲೆಯಲ್ಲಿ ಸುರಂಗಗಳು ಇರುವ ಪ್ರದೇಶಕ್ಕೆ ಮುಳ್ಳುತಂತಿ ಬೇಲಿಗಳನ್ನು ಹಾಕಲಾಗಿದೆ. ಅಲ್ಲದೆ, ಆ ಮೂಲಕ ಯಾರು ಭೂಗತ ಸುರಂಗ ಪ್ರದೇಶವನ್ನು ಪ್ರವೇಶಿಸದಂತೆ, ಸುರಂಗಕ್ಕೆ ಯಾವುದೇ ಹಾನಿ ಎದುರಾಗದಂತೆ ಪಾಕಿಸ್ತಾನ ತೀವ್ರ ಎಚ್ಚರಿಕೆಗಳನ್ನು ವಹಿಸಿದೆ ಎನ್ನಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com