ಬಂಧಿತರ ಪೈಕಿ ಅದೀಲ್ ಅಹಮದ್ ನಿಗ್ರೂ ಸಹ ಒಬ್ಬನಾಗಿದ್ದು ಇತ ಉಗ್ರ ಚಟುವಟಿಕೆಯ ತಳಮಟ್ಟದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ. ನಿಗ್ರೂನನ್ನು ತೀವ್ರ ವಿಚಾರಣೆ ನಡೆಸಿದಾಗ ಆತ ಆಶಿಂಪೋರಾದ ಕಾನ್ಸ್ ಟೇಬಲ್ ಶಬೀರ್ ಅಹಮದ್ ಮಲೀಕ್ ನಿಂದ ಒಂದು ಎಕೆ 47 ಹಾಗೂ 40 ಸಜೀವ ಗುಂಡು ಇನ್ನೊಬ್ಬ ಕಾನ್ಸ್ ಟೇಬಲ್ ನಾಜೀರ್ ಅಹಮದ್ ನಾಜರ್ ನಿಂದ ಸಹ ಒಂದು ಎಕೆ 47 ಹಾಗೂ 40 ಸಜೀವ ಗುಂಡುಗಳನ್ನು ಪಡೆದಿರುವುದಾಗಿ ಹೇಳಿದ್ದಾನೆ.