ಅರುಷಿ ಹತ್ಯೆ ಪ್ರಕರಣ: ಟೈಮ್ ಲೈನ್

ಅಲಹಾಬಾದ್ ಹೈಕೋರ್ಟ್, 2008 ರಲ್ಲಿ ನಡೆದ ಆರುಷಿ ಮತ್ತು ಸಹಾಯದ ಹೇಮ್ ರಾಜ್ ಅವರ ಕೊಲೆಗೆ ಸಂಬಂಧಿಸಿ ಇಂದು ತೀರ್ಪು ಪ್ರಕಟಿಸಲಿದೆ.
ತಲ್ವಾರ್ ದಂಪತಿ
ತಲ್ವಾರ್ ದಂಪತಿ
ಅಲಹಾಬಾದ್:  ಅಲಹಾಬಾದ್ ಹೈಕೋರ್ಟ್, 2008 ರಲ್ಲಿ ನಡೆದ ಆರುಷಿ ಮತ್ತು ಸಹಾಯದ ಹೇಮ್ ರಾಜ್ ಅವರ ಕೊಲೆಗೆ  ಸಂಬಂಧಿಸಿ ಇಂದು ತೀರ್ಪು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಅರುಷಿ ಕೊಲೆ ಪ್ರಕರಣ ಸಾಗಿ ಬಂದ ಹಾದಿಯತ್ತ ಒಂದು ನೋಟ-
2008
ಮೇ 15-16: ನೋಯ್ಡಾದ ಫ್ಲಾಟ್ ನ ಮಲಗುವ ಕೋಣೆಯಲ್ಲಿ ಅರುಷಿ ತಲ್ವಾರ್ ಮೃತದೇಹ ಪತ್ತೆಯಾಗಿತ್ತು.
ಮೇ 16: ಉತ್ತರ ಪ್ರದೇಶದ ಪೋಲೀಸರು ಪ್ರಕರನದ ತನಿಖೆ ಪ್ರಾರಂಭಿಸಿದ್ದರು. ನೇಪಾಳಿ ಮೂಲದ ಸಹಾಯಕ ಹೇಮ್ ರಾಜ್ ನನ್ನು ಹತ್ಯೆಯ ಯ ಶಂಕಿತನೆಂದು ಬಗೆಯಲಾಗಿತ್ತು.
ಮೇ 17: ಹೇಮ್ ರಾಜ್ ಮೃತದೇಹವು ಅ ತಲ್ವಾರ್ ಮನೆಯ ತಾರಸಿಯಲ್ಲಿ ಪತ್ತೆಯಾಗಿತ್ತು
ಮೇ 18: ಉತ್ತರ ಪ್ರದೇಶ ಪೋಲಿಸ್ ಅವಳಿ ಕೊಲೆಗಳನ್ನು ತನಿಖೆ ತೀವ್ರಗೊಳಿಸಿದ್ದರು. ಮನೆಯೊಳಗಿನವರೇ ಕೊಲೆಗಳನ್ನು ಮಾಡಿದ್ದಾರೆಂದು ಶಂಕಿಸಿದ್ದರು.
ಮೇ 19: ತಲ್ವಾರ್ ಕುಟುಂಬದ ಮಾಜಿ ಸಹಾಯಕಿ ವಿಷ್ಣು ಶರ್ಮಾ ಶಂಕಿತನೆಂದು ಹೇಳಲಾಯಿತು.
ಮೇ 21: ಅವಳಿ ಕೊಲೆ ತನಿಖೆಗೆ ದೆಹಲಿ ಪೋಲೀಸರು ಕೈ ಜೋಡಿಸಿದರು.
ಮೇ 22: ತಲ್ವಾರ್ ದಂಪತಿಗಳ ಮೇಲೆಯೂ ಹತ್ಯೆಯ ಶಂಕೆ ವ್ಯಕ್ತಪಡಿಸಲಾಗುತ್ತದೆ. ತನಿಖೆ ನಡೆಸುತ್ತಿದ್ದ ಪೊಲೀಸರು, ಅರುಷಿ ಆತ್ಮೀಯ ಗೆಳತಿಯನ್ನು ವಿಚಾರಣೆ ನಡೆಸುತ್ತಾರೆ. ಆಕೆ  45 ದಿನಗಳಲ್ಲಿ ಅರುಷಿಯೊಡನೆ 688 ಬಾರಿ ಮಾತನಾಡಿದ್ದರು.
ಮೇ 23: ಜೋಡಿ ಕೊಲೆ ಆಪಾದನೆ ಮೇಲೆ ಅರುಷಿ ತಂದೆ ರಾಜೇಶ್ ತಲ್ವಾರ್ ಬಂಧನ.
ಮೇ 29: ಕೊಲೆ ಪ್ರಕರಣವನ್ನು ಉತ್ತರ ಪ್ರದೇಶ ಪೋಲೀಸರಿಂದ ಸಿಬಿಐಗೆ ಹಸ್ತಾಂತರಿಸಲು ನೋಟೀಸ್ ಹೊರಡಿಸಲಾಯಿತು.
ಜೂನ್ 1:ಅರುಷಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ಪ್ರಾರಂಭಿಸುತ್ತದೆ
ಜೂನ್ 13: ಸಿಬಿಐ ನಿಂದ ರಾಜೇಶ್ ತಲ್ವಾರ್ ಅವರ ಸಹಾಯಕ ಕೃಷ್ಣ ಬಂಧನ
ಜೂನ್ 20: ದೆಹಲಿಯ ಸಿಎಫ್ ಎಸ್ ಎಲ್ ನಲ್ಲಿ ರಾಜೇಶ್ ತಲ್ವಾರ್ ಸುಳ್ಳು ಪತ್ತೆ ಪರೀಕ್ಷೆ ನಡೆಯಿತು.
ಜೂನ್ 25: ನೂಪುರ್ ತಲ್ವಾರ್ ಗೆ ಎರಡನೇ ಸುಳ್ಳು ಪತ್ತೆ ಪರೀಕ್ಷೆ ನದೆಸಲಾಯಿತು. ಆಕೆಯ ಮೊದಲ ಪರೀಕ್ಷೆಯು ಅಪೂರ್ಣ ಎನ್ನಲಾಗಿತ್ತು.
ಜೂನ್ 26: ಅರುಷಿ ಹತ್ಯಾ ಪ್ರಕರಣವನ್ನು "ಬ್ಲೈಂಡ್ ಕೇಸ್" ಎಂದು ಸಿಬಿಐ ಘೋಷಣೆ. ಘಾಜಿಯಾಬಾದ್ ನ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ರಾಜೇಶ್ ತಲ್ವಾರ್ ಜಾಮೀನು ನಿರಾಕರಣೆ.
ಜುಲೈ 12: ಘಾಜಿಯಾಬಾದ್ ದಾಸ್ನಾ ಜೈಲಿನಿಂದ ರಾಜೇಶ್ ತಲ್ವಾರ್ ಜಾಮೀನಿನ ಮೇಲೆ ಬಿಡುಗಡೆ.
2009
ಫೆಬ್ರವರಿ 8-12: ಸಿಬಿಐ ಮನವಿಯ ಮೇರೆಗೆ ಫೆಬ್ರವರಿ 8 ರಿಂದ ಫೆಬ್ರವರಿ 12 ರ ನಡುವೆ ನೂಪುರ್ ತಲ್ವಾರ್ ಗೆ ನಾರ್ಥೋ-ಅನಾಲಿಸಿಸ್ ಪರೀಕ್ಷೆ ನಡೆಯಿತು.
ಫೆಬ್ರವರಿ 15-20: ಫೆಬ್ರವರಿ 15 ರಿಂದ ಫೆಬ್ರವರಿ 20 ರ ನಡುವೆ ರಾಜೇಶ್ ತಲ್ವಾರ್ ಗೆ ನಾರ್ಥೋ-ಅನಾಲಿಸಿಸ್ ಪರೀಕ್ಷೆ ಮಾಡಲಾಗಿತ್ತು.
ಡಿಸೆಂಬರ್ 29: ಅಂತಿಮ ವರದಿಯೊಡನೆ  ಪ್ರಕರಣವನ್ನು ಕೊನೆಗೊಳಿಸಿದ ಸಿಬಿಐ. ಪ್ರಕರಣದಲ್ಲಿ ಸೇವಕರು ಕ್ಲೀನ್ ಚಿಪ್ ಪಡೆದರೆ ತಲ್ವಾರ್ ದಂಪತಿಗಳೇ ಅಪರಾಧಿಗಳು ಎನ್ನಲಾಗಿತ್ತು
2010
ಡಿಸೆಂಬರ್ 2010: ರಾಜೇಶ್ ತಲ್ವಾರ್ ಮುಖ್ಯ ಆರೋಪಿ ಎಂದು ಸಿಬಿಐ ಮುಖ್ಯಸ್ಥರ ವರದಿ ಹೇಳಿತ್ತಾದರೂ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಿರುವುದಿಲ್ಲ.
2011
ಜನವರಿ 25, 2011: ರಾಜೇಶ್ ತಲ್ವಾರ್ ಮೇಲೆ ನ್ಯಾಯಾಲಯದ ಆವರಣದಲ್ಲಿ ದಾಳಿ ನದೆಯಿತು.
ಫೆಬ್ರವರಿ 9, 2011: ಸಿಬಿಐ ವರದಿಯನ್ನು ತಿರಸ್ಕರಿಸಿದ ಟ್ರಯಲ್ ನ್ಯಾಯಾಲಯ ಕೊಲೆಯ ಆರೋಪಗಳನ್ನು ಎದುರಿಸುತ್ತಿರುವ ತಲ್ವಾರ್ ದಂಪತಿಗೆ ಸಮನ್ಸ್ ಜ್ರಿ ಮಾಡಿತು.
ಫೆಬ್ರವರಿ 21: ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ತಲ್ವಾರ್ ದಂಪತಿಗಳಿಂದ ಅಲಹಾಬಾದ್ ಹೈ ಕೋರ್ಟ್ ಗೆ ಮೊರೆ.
ಮಾರ್ಚ್ 18: ಹೈಕೋರ್ಟ್ ನಿಂದ ತಲ್ವಾರ್ ದಂಪತಿಗಳ ಮನವಿ ತಿರಸ್ಕೃತ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ.
ಮಾರ್ಚ್ 19, 2011: ವಿಚಾರಣೆ ರದ್ದು ಕೋರಿ ಸುಪ್ರೀಂ ಮೆಟ್ಟಿಲೇರಿದ ದಂಪತಿ.
2012
ಜನವರಿ 6, 2012: ತಲ್ವಾರ್ ಅವರ ಮನವಿಯನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್
2013
ಏಪ್ರಿಲ್ 2013: ಅರುಷಿ ಮತ್ತು ಹೇಮ್ ರಾಜ್, ತಲ್ವಾರ್ ರಿಂದ ಕೊಲ್ಲಲ್ಪಟ್ಟರು ಎಂದು ನ್ಯಾಯಾಲಯಕ್ಕೆ ತಿಳಿಸಿದ ಸಿಬಿಐ.
ಮೇ 3: ಮಾಜಿ ಸಿಬಿಐ ಜಂಟಿ ನಿರ್ದೇಶಕ ಅರುಣ್ ಕುಮಾರ್ ಸೇರಿದಂತೆ ಸಾಕ್ಷಿಯಾಗಿ 14 ಮಂದಿಗೆ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಲು ರಕ್ಷಣಾ ನ್ಯಾಯಾಲಯ ಮನವಿ. ಸಿಬಿಐ ನಿಂದಮನವಿಗೆ ವಿರೋಧ.
ಮೇ 6: 14 ಸಾಕ್ಷಿಗಳನ್ನು ಕರೆಸಿಕೊಳ್ಳುವ ತಲ್ವಾರ್ ಮನವಿಯನ್ನು ವಜಾಗೊಳಿಸಿದ ಟ್ರಯಲ್ ನ್ಯಾಯಾಲಯ . ರಾಜೇಶ್ ಮತ್ತು ನೂಪುರ್ ಹೇಳಿಕೆಗಳನ್ನು ರೆಕಾರ್ಡ್ ಮಾಡುವಂತೆ ಆದೇಶ.
ಮೇ 13: ತಲ್ವಾರ್ ಅರ್ಜಿಯನ್ನು ಮರುಪರಿಶೀಲಿಸಲು ಸುಪ್ರೀಂಕೋರ್ಟ್ ನಕಾರ.
ನವೆಂಬರ್ 26: ಘಾಜಿಯಾಬಾದ್ ನ ವಿಶೇಷ ಸಿಬಿಐ ನ್ಯಾಯಾಲಯದಿಂದ ತಲ್ವಾರ್ ಗೆ ಜೀವಾವಧಿ ಶಿಕ್ಷೆ ಪ್ರಕಟ
2017
ಆಗಸ್ಟ್ 1: ಅರುಷಿ ಮತ್ತು ಸಹಾಯದ ಹೇಮ್ ರಾಜ್ ಅವರ ಕೊಲೆಗೆ ಸಂಬಂಧಿಸಿ ರಾಜೇಶ್ ಮತ್ತು ನೂಪುರ್ ತಲ್ವಾರ್ ಸಲ್ಲಿಸಿದ ಮೇಲ್ಮನವಿಗಳನ್ನು ಅಲಹಾಬಾದ್ ಹೈಕೋರ್ಟ್ ಪುನಃ ಹೊಸದಾಗಿ ವಿಚಾರಣೆ ನಡೆಸಲಿದೆ ಎಂದು ಹೇಳಿತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com