ಸಾಂದರ್ಭಿಕ ಚಿತ್ರ
ದೇಶ
ಬೀದಿನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ವ್ಯಕ್ತಿಯ ಬಂಧನ!
ಬೀದಿನಾಯಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇರೆಗೆ ಮುಂಬೈನಲ್ಲಿ ಯುವರನೋರ್ವನನ್ನು ಭಾನುವಾರ ಬಂಧಿಸಲಾಗಿದೆ.
ಮುಂಬೈ: ಬೀದಿನಾಯಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇರೆಗೆ ಮುಂಬೈನಲ್ಲಿ ಯುವರನೋರ್ವನನ್ನು ಭಾನುವಾರ ಬಂಧಿಸಲಾಗಿದೆ.
ಮುಂಬೈನ ಪೊವೈ ಪ್ರದೇಶದಲ್ಲಿ ಈ ವಿಕೃತ ಘಟನೆ ಬೆಳಕಿಗೆ ಬಂದಿದ್ದು, 19 ವರ್ಷದ ಯುವಕ ಕುಲದೀಪ್ ಕಟೋರಿಯಾ ಎಂಬಾತನನ್ನು ಮುಂಬೈನ ಪೋವೈ ಪೊಲೀಸರು ಬಂಧಿಸಿದ್ದಾರೆ. ಅಂತೆಯೇ ಆತನ ವಿರುದ್ಧ ಐಪಿಸಿ ಸೆಕ್ಷನ್ 377 ಕಾಯ್ದೆಯಡಿ (ಅಸಹಜ ಕ್ರಿಮಿನಲ್ ಪ್ರಕರಣ)ಯಲ್ಲಿ ಪ್ರಕರಣ ದಾಖಲು ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ಸಂಬಂಧ ದೂರು ನೀಡಿರುವ ಪ್ರತ್ಯಕ್ಷ ದರ್ಶಿಯೂ ಆಗಿರುವ ವ್ಯಕ್ತಿ, ಶುಕ್ರವಾರ ರಾತ್ರಿ ಕುಲದೀಪ್ ಕಟೋರಿಯಾ ಬೀದಿನಾಯಿಯೊಂದನ್ನು ಸಾರ್ವಜನಿಕ ಶೌಚಾಲಯದೊಳೆಗೆ ಕರೆದೊಯ್ದಿದ್ದ. ಅಲ್ಲದೆ ನಾಯಿಯೊಂದಿಗೆ ಅಹಸಜ ಲೈಂಗಿಕ ಕ್ರಿಯೆ ನಡೆಸಿದ್ದ. ಇದನ್ನು ತಾನು ನೋಡಿದ ವಿಚಾರ ತಿಳಿದ ಕುಲದೀಪ್ ಇದನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ಎಂದು ಹೇಳಿದ್ದಾರೆ.
ಪ್ರಸ್ತುತ ಈ ಪ್ರಕರಣ ಸಂಬಂಧ ಪೋವೈ ಪೊಲೀಸ್ ಠಾಣೆಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಸಾಕ್ಷಿ ಮತ್ತು ಆರೋಪಿ ಇಬ್ಬರನ್ನೂ ವಿಚಾರಣೆ ನಡೆಸಿದ್ದಾರೆ. ಅಂತೆಯೇ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ತೆಲಂಗಾಣದ ಹೈದರಾಬಾದ್ ನಲ್ಲೂ ಇತ್ತೀಚೆಗೆ ಇಂತಹುದೇ ಘಟನೆ ಬೆಳಕಿಗೆ ಬಂದಿತ್ತು.. ಯುವಕನೋರ್ವ ಗರ್ಭ ಧರಿಸಿದ್ದ ನಾಯಿಯನ್ನು ಕೊಂದು ಅದರೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಸಾರ್ವಜನಿಕರಿಂದ ಗೂಸ ತಿಂದಿದ್ದ. ಈ ಘಟನೆ ಮರೆಯಾಗುವ ಮುನ್ನವೇ ಮಹಾರಾಷ್ಟ್ರದಲ್ಲಿ ಇಂತಹ ಮತ್ತೊಂದು ಘಟನೆ ನಡೆದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ