ತ್ರಿಪುರ: ಬಿಎಸ್ಎಫ್ ಅಧಿಕಾರಿ ಮೇಲೆ ಗೋ ಕಳ್ಳ ಸಾಗಾಣಿಕೆದಾರರ ದಾಳಿ, ಸ್ಥಿತಿ ಗಂಭೀರ

ಕರ್ತವ್ಯ ನಿರತ ಗಡಿ ಭದ್ರತಾ ಪಡೆಯ ಕಮಾಂಡಿಂಗ್ ಅಧಿಕಾರಿಯೊಬ್ಬರಮೇಲೆ ಗೋ ಕಳ್ಳ ಸಾಗಾಣಿಕೆದಾರರ ಗುಂಪೊಂದು ದಾಳಿ ಮಾಡಿರುವ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ...
ಕರ್ತವ್ಯ ನಿರತ ಗಡಿ ಭದ್ರತಾ ಪಡೆಯ ಕಮಾಂಡಿಂಗ್ ಅಧಿಕಾರಿ ದೀಪಕ್ ಮಂಡಲ್
ಕರ್ತವ್ಯ ನಿರತ ಗಡಿ ಭದ್ರತಾ ಪಡೆಯ ಕಮಾಂಡಿಂಗ್ ಅಧಿಕಾರಿ ದೀಪಕ್ ಮಂಡಲ್
ಅಗರ್ತಲಾ: ಕರ್ತವ್ಯ ನಿರತ ಗಡಿ ಭದ್ರತಾ ಪಡೆಯ ಕಮಾಂಡಿಂಗ್ ಅಧಿಕಾರಿಯೊಬ್ಬರಮೇಲೆ ಗೋ ಕಳ್ಳ ಸಾಗಾಣಿಕೆದಾರರ ಗುಂಪೊಂದು ದಾಳಿ ಮಾಡಿರುವ ಘಟನೆ ಸೋಮವಾರ ಬೆಳಗಿನ ಜಾನ ನಡೆದಿದೆ. 
ಗಡಿ ಭದ್ರತಾ ಪಡೆಯ 145 ಬೆಟಾಲಿಯನ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೀಪಕ್ ಕೆ ಅವರ ಮೇಲೆ ಗೋಕಳ್ಳ ಸಾಗಾಣಿಕೆದಾರರು ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. 
ಇಂದು ಬೆಳಿಗಿನ ಜಾವ 2 ಗಂಟೆ ಸುಮಾರಿಗೆ ಸಿಪಾಹಿಜಲಾ ಜಿಲ್ಲೆಯಲ್ಲಿರುವ ಬೆಲರ್ದೆಪ್ಪಾ ಗಡಿಯಲ್ಲಿ ದೀಪಕ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ವಾಹನದಲ್ಲಿ ಬಂದಿರುವ ಗೋ ಕಳ್ಳ ಸಾಗಾಣಿಕೆದಾರರು ಏಕಾಏಕಿ ದೀಪಕ್ ಅವರ ಮೇಲೆ ವಾಹನದಿಂದ ಡಿಕ್ಕಿ ಹೊಡೆಸಿದ್ದಾರೆ. ಪರಿಣಾಮ ದೀಪಕ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಅವರ ಪರಿಸ್ಥಿತಿ ತೀರಾ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತಾಗೆ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಅಂತರಾಷ್ಟ್ರೀಯ ಗಡಿಯಲ್ಲಿ ಗೋ ಸಾಗಾಣಿಕೆ ಹಾಗೂ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಕುರಿತಂತೆ ದೀಪಕ್ ಅವರು ತಮ್ಮ ತಂಡದೊಂದಿಗೆ ಅಗರ್ತಲಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಗೋವುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದೆ. ಬಳಿಕ ದೀಪಕ್ ಅವರು ತಮ್ಮ ಭದ್ರತಾ ಸಿಬ್ಬಂದಿ, ವಾಹನ ಚಾಲಕನೊಂದಿಗೆ ಸೇರಿಕೊಂಡು ವಾಹನವನ್ನು ನಿಲ್ಲಿಸಲು ಯತ್ನಿಸಿದ್ದಾರೆ. ವಾಹನದಲ್ಲಿ 25ಕ್ಕೂ ಹೆಚ್ಚು ಗೋ ಕಳ್ಳಸಾಗಾಣಿಕೆದಾರರಿದ್ದರು ಎಂದು ವರದಿಗಳು ತಿಳಿಸಿವೆ. 
ದೀಪಕ್ ಅವರು ಸ್ಥಳಕ್ಕೆ ಹೋದ ಬಳಿಕ ವಾಹನವನ್ನು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಕಳ್ಳರು ಏಕಾಏಕಿ ದಾಳಿ ಮಾಡದ್ದಾರೆ. ಅಲ್ಲದೆ, ವಾಹನದಿಂದ ದೀಪಕ್ ಅವರಿಗೆ ಡಿಕ್ಕಿ ಹೊಡೆಸಿದ್ದಾರೆ. ಪರಿಣಾಮ ದೀಪಕ್ ಅವರ ತಲೆ, ಕೈ, ಕಾಲುಗಳಿಗೆ ಗಂಭೀರವಾದ ಗಾಯಗಳಾಗಿವೆ. ಕೂಡಲೇ ಸ್ಥಳಕ್ಕಾಗಮಿಸಿದ ಭದ್ರತಾ ಸಿಬ್ಬಂದಿಗಳು ದೀಪಕ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಐದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com