ಕಾಂಗ್ರೆಸ್‌ಗೆ ಮುಜುಗರದ ಸಂಗತಿ: ದಿಗ್ವಿಜಯ್ ಸಿಂಗ್ ಅಳಿಯನ ವಿರುದ್ಧ ಚೆಕ್ ಬೌನ್ಸ್ ಪ್ರಕರಣ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಕಂಪನಿ ಅವ್ಯವಹಾರ ಆರೋಪ ಸಂಬಂಧ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೇ ಇತ್ತ ಕಾಂಗ್ರೆಸ್...
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್
ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಕಂಪನಿ ಅವ್ಯವಹಾರ ಆರೋಪ ಸಂಬಂಧ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೇ ಇತ್ತ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅಳಿಯನ ವಿರುದ್ಧ ಚೆಕ್ ಬೌನ್ಸ್ ಪ್ರಕರಣದ ಆರೋಪ ಕೇಳಿ ಬಂದಿದೆ. 
ದಿಗ್ವಿಜಯ ಸಿಂಗ್ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾಗ ಅವರ ಅಳಿಯ ಭವಾನಿ ಸಿಂಗ್ ಬೆಂಗಳೂರಿನ ಬಾಲಾಜಿ ಎಲೆಕ್ಟ್ರಿಕಲ್ ಗೆ ರಾಜ್ಯ ಸರ್ಕಾರದಿಂದ ಎಲೆಕ್ಟ್ರಿಕ್ ಗುತ್ತಿಗೆ ಕೊಡಿಸುವುದಾಗಿ ಹೇಳಿ 1.15 ಕೋಟಿ ಪಡೆದು ಟೋಪಿ ಹಾಕಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. 
ಇನ್ನು ಬಾಲಾಜಿ ಎಲೆಕ್ಟ್ರಿಕಲ್ ಮಾಲೀಕರು ಈ ಹಣವನ್ನು ದಿಗ್ವಿಜಯ್ ಸಿಂಗ್ ಸಮ್ಮುಖದಲ್ಲೇ ನೀಡಿದ್ದಾಗಿ ಆರೋಪಿಸಿದ್ದಾರೆ. ಹಣ ಕೊಟ್ಟ ಕೆಲ ದಿನಗಳ ಬಳಿಕ ದಿಗ್ವಿಜಯ್ ಸಿಂಗ್ ಕಾಂಗ್ರೆಸ್ ಉಸ್ತುವಾರಿ ಹುದ್ದೆಯಿಂದ ತೆಗೆಯಲಾಯಿತು. ಇದರಿಂದ ಬಾಲಾಜಿ ಎಲೆಕ್ಟ್ರಿಕಲ್ ಗೆ ಹಣ ವಾಪಸ್ ಮಾಡಲಿಲ್ಲ. ಕೊನೆಗೆ ಒತ್ತಾಯದ ಮೇರೆಗೆ ಮೂರು ಚೆಕ್ ನ್ನು ಭವಾನಿಸಿಂಗ್ ನೀಡಿದ್ದು ಈ ಚೆಕ್ ಗಳೆಲ್ಲವೂ ಬೌನ್ಸ್ ಆಗಿದೆ. 
ಈ ಹಿನ್ನಲೆಯಲ್ಲಿ ಬಾಲಾಜಿ ಎಲೆಕ್ಟ್ರಿಕಲ್ಸ್ ಮಾಲೀಕರು ವಕೀಲರ ಮೂಲಕ ಭವಾನಿ ಸಿಂಗ್ ಗೆ ನೋಟಿಸ್ ಜಾರಿಯಾಗಿತ್ತು. ನೋಟಿಸ್ ಗೆ ಉತ್ತರ ಕೊಡದ ಹಿನ್ನೆಲೆಯಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದ್ದು 22 ಎಸಿಎಂಎಂ ಕೋರ್ಟ್ ಭವಾನಿ ಸಿಂಗ್ ಗೆ ಸಮನ್ಸ್ ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com