ಒಡಿಶಾ: ರೂರ್ಕೆಲಾ ನಗರದ ಪಟಾಕಿ ವಿತರಣಾ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ, 46 ಅಂಗಡಿಗಳು, 18 ಬೈಕ್ ಗಳು ಭಸ್ಮ

ರಾಜಧಾನಿ ದೆಹಲಿಯಲ್ಲಿ ಈ ವರ್ಷ ಪಟಾಕಿಗಳ ಮಾರಾಟಕ್ಕೆ ನಿಷೇಧ ಹೇರಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದರು ಕೂಡ ನಿಯಮವನ್ನು ...
ಬೆಂಕಿ ಹತ್ತಿ ಉರಿದು ಅಂಗಡಿಗಳು ಧ್ವಂಸಗೊಂಡಿರುವುದು
ಬೆಂಕಿ ಹತ್ತಿ ಉರಿದು ಅಂಗಡಿಗಳು ಧ್ವಂಸಗೊಂಡಿರುವುದು
ರೂರ್ಕೆಲಾ(ಒಡಿಶಾ): ರೂರ್ಕೆಲಾ ನಗರದ ಹತ್ತಿರ ಪವರ್ ಹೌಸ್ ರಸ್ತೆಯಲ್ಲಿ ಪಟಾಕಿ ವಿತರಣಾ ಮಾರುಕಟ್ಟೆಯಲ್ಲಿ ಬೆಂಕಿ ಹತ್ತಿ ಉರಿದು ಓರ್ವ ಮೃತಪಟ್ಟು ಅಪಾರ ಆಸ್ತಿಪಾಸ್ತಿ ನಷ್ಟವಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಪ್ರಾಥಮಿಕ ಅಂದಾಜಿನ ಪ್ರಕಾರ, ಸುಮಾರು 46 ತಾತ್ಕಾಲಿಕ ಅಂಗಡಿಗಳು, 18 ಬೈಕ್ ಗಳು ಮತ್ತು ಸುಮಾರು 1.5 ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿ ಅಗ್ನಿಅವಘಡಕ್ಕೆ ಸಿಕ್ಕಿ ಬೂದಿಯಾಗಿದೆ. 
ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪನ್ಪೋಶ್ ಸಬ್ ಕಲೆಕ್ಟರ್ ಹಿಮಾಂಶು ಶೇಖರ್ ಬೆಹೆರಾ, ಇಂದು ನಸುಕಿನ ಜಾವ 2.30ರ ಸುಮಾರಿಗೆ ಬೆಂಕಿ ಹತ್ತಿಕೊಂಡಿತು ಎಂದು ಹೇಳಿದರು.
ಬೆಂಕಿ ಹತ್ತಿಕೊಂಡ ತಕ್ಷಣವೇ ಆಳೆತ್ತರಕ್ಕೆ ವ್ಯಾಪಿಸಿ ಸುತ್ತಮುತ್ತಲ ನಿವಾಸಿಗಳನ್ನು ಎಚ್ಚರಿಸಿತು. ಉಡಿತ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರದೇಶವಿದ್ದು ಇದೀಗ ಭದ್ರತೆ ಕ್ರಮವಾಗಿ ಈ ಪ್ರದೇಶವನ್ನು ಸುತ್ತುವರಿಯಲಾಗಿದೆ. ಒಡಿಶಾ ಸರ್ಕಾರದ 6 ಬೆಂಕಿ ಆರಿಸುವ ಘಟಕಗಳನ್ನು ಮತ್ತು ಎರಡು ರೂರ್ಕೆಲಾ ಸ್ಟೀಲ್ ಘಟಕಗಳನ್ನು ತರಿಸಿ ಬೆಂಕಿಯನ್ನು ಆರಿಸಲಾಯಿತು.
ರೂರ್ಕೆಲಾ ಸಿಟಿಯಾದ್ಯಂತ 243 ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ತೆರೆಯಲು ಸುಂದರ್ಗ್ ಜಿಲ್ಲಾಡಳಿತ ಅನುಮತಿ ನೀಡಿತ್ತು. ಅಗ್ನಿ ಸುರಕ್ಷತೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com