ಕೆಲ ನಾಯಕರಲ್ಲಿ ನೈತಿಕತೆಯ ಕೊರತೆ; ಆದ್ದರಿಂದ ಫೇಸ್‏ಬುಕ್, ಟ್ವಿಟ್ಟರ್ ಬಳಕೆ: ಸ್ಯಾಮ್ ಪಿತ್ರೋಡ

ಕೆಲವು ನಾಯಕರು ನೈತಿಕತೆಯ ಕೊರತೆಯನ್ನು ಅನುಭವಿಸುತ್ತಿರುತ್ತಾರೆ, ಇದರಿಂದಾಗಿ ಅವರು ಫೇಸ್ ಬುಕ್ ಮತ್ತು ಟ್ವಿಟ್ಟರ್ ನಂತಹಾ ಫ್ಯಾನ್ಸಿ ಪರಿಕರಗಳನ್ನು ಬಳಸಿ ಜನರೊಡನೆ ಸಂವಹನ ನಡೆಸುತ್ತಾರೆ
ಸ್ಯಾಮ್ ಪಿತ್ರೋಡ
ಸ್ಯಾಮ್ ಪಿತ್ರೋಡ
Updated on
ಅಹಮದಾಬಾದ್: ಕೆಲವು ನಾಯಕರು ನೈತಿಕತೆಯ ಕೊರತೆಯನ್ನು ಅನುಭವಿಸುತ್ತಿರುತ್ತಾರೆ,  ಇದರಿಂದಾಗಿ ಅಂತಹವರು ಫೇಸ್ ಬುಕ್ ಮತ್ತು ಟ್ವಿಟ್ಟರ್ ನಂತಹಾ ಫ್ಯಾನ್ಸಿ ಪರಿಕರ ಗಳಿಗೆ ಅವಲಂಬಿತರಾಗಿದ್ದಾರೆ . ಅವರು ಅವುಗಳಿಂದಲೇ  ಜನರೊಡನೆ ಸಂವಹನ ನಡೆಸುತ್ತಾರೆ ಎಂದು ಟೆಲಿಕಾಂ ಉದ್ಯಮಿ ಸ್ಯಾಮ್ ಪಿತ್ರೋಡ ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನವು 'ರಾಮ  ರಾಜ್ಯ' ಅಥವಾ ಆದರ್ಶ ರಾಜ್ಯ ಎಂಬ ಗಾಂಧೀಜಿಯ ಪರಿಕಲ್ಪನೆಗೆ ಉತ್ತೇಜನ ನೀಡಬಹುದು ಎಂದು ಅವರು ಹೇಳಿದರು.
"ಮಹಾತ್ಮ ಗಾಂಧಿ ಸತ್ಯ, ನಂಬಿಕೆ, ಸರಳತೆ, ಇವುಗಳಿಗೆ ಉತ್ತೇಜನ ನೀಡಿದ್ದರು. ದುರದೃಷ್ಟವಶಾತ್, ನಮ್ಮ ದಿನನಿತ್ಯದ ಜೀವನದಿಂದ ನಾವು ಗಾಂಧಿಯನ್ನು ದೂರ ಸರಿಸಿದ್ದೇವೆ" ಎಂದು ಪಿತ್ರೋಡ ಹೇಳಿದರು.
"ಇಂದು ಭಾರತ ಮತ್ತು ಅಮೆರಿಕದಲ್ಲಿ ಯುವ ಜನರಿಗೆ ದೀರ್ಘ ಕಾಲದ ಬವಿಷ್ಯದ ದೃಷ್ಟಿಕೋನದಲ್ಲಿ ಗೊಂದಲ ಏರ್ಪ್ಟ್ಟಿದೆ" ಅವರು 1920 ರಲ್ಲಿ ಮಹಾತ್ಮಾ ಗಾಂಧಿ ಸ್ಥಾಪಿಸಿದ ಗುಜರತ್ ವಿದ್ಯಾಪೀಠದ 64 ನೇ ವಾರ್ಷಿಕ ಸಮಾವೇಶದಲ್ಲಿ ಹೇಳಿದರು.
"ವೈಯಕ್ತಿಕ ನಿಂದನೆ, ಸುಳ್ಳು ಭರವಸೆ ಗಳನ್ನು ಮಾಧ್ಯಮ ಸಂದೆಶಾವಾಗಿ ಜನರು ಭಾವಿಸಿದ್ದಾರೆ" ಎಂದು ಪಿತ್ರೋಡ ಅಭಿಪ್ರಾಯ ಪಟ್ಟರು.
ಪಿತ್ರೋಡ ನಿನ್ನೆ ಭೇಟಿಯಾದ ಸ್ವಯಂಸೇವಾ ಸಂಸ್ಥೆ ಕೆಲವು ಪ್ರತಿನಿಧಿಗಳು ತಮ್ಮ ಕೆಲಸಕ್ಕೆ ಅಡೆತಡೆ ಎದುರಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.  ಇಂತಹ ಘಟನೆಗಳು ಭಾರತದಲ್ಲಿ ಸ್ವೀಕಾರಾರ್ಹವಲ್ಲ, ಎಂದು ಪಿತ್ರೋಡ ಹೇಳಿದರು.
ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಮಹಾತ್ಮ ಗಾಂಧಿಯವರ ಕನಸಿನ ಭಾರತವನ್ನು ಸಾಕಾರಗೊಳಿಸಬೇಕಿದೆ. ಮೊಬೈಲ್ ಫೋನ್ ಗಳ ಮೂಲಕ 1.2 ಶತಕೋಟಿ ಭಾರತೀಯರನ್ನು ಸಂಪರ್ಕಿಸುವ ಪ್ರಯತ್ನವನ್ನು ಮಾಡಲು ಅವರು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಗಾಂಧೀಜಿಯ ವಿಚಾರಗಳನ್ನು ಪ್ರಚುರಪಡಿಸಲು ನಾವು ಸಾಮಾಜಿಕ ಮಾದ್ಯಮ, ಆಧುನಿಕ ಮಾದ್ಯಮಗಳನ್ನು ಬಳಸಿಕೊಳ್ಳಬೇಕಿದೆ.
"ಮುಕ್ತತೆ, ಸಂಪರ್ಕ, ನೆಟ್ ವರ್ಕಿಂಗ್, ಗಾಂಧೀಜಿ ಈ ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು.  ಆದರೆ ಅವರ ಕಾಲದಲ್ಲಿ ಐಟಿ ಇರಲಿಲ್ಲ. ಹೀಗಾಗಿ ನಾವಿಂದು ಅವರ ವಿಚಾರಗಳನ್ನು ಐಟಿ ಉಪಯೋಗದೊಡನೆ ಜಗತ್ತಿನಾದ್ಯಂತ ಹರಡಬೇಕು ಎಂದರು.
ಭ್ರಷ್ಠಾಚಾರವನ್ನು ಕಡಿಮೆ ಮಾದಲು ಮತ್ತು ಚುನಾವಣಾ ಸಮಯದಲ್ಲಿ ಬೃಹತ್ ಪ್ರಮಾಣದ ಹಣದ ಹರಿವನ್ನು ತಗ್ಗಿಸಲು ತಂತ್ರಜ್ಞಾನವನ್ನು ಬಳಸಿಕೊಂಡು ಚುನಾವಣಾ ಮಾದರಿಯನ್ನು ಬದಲಾಯಿಸಿಕೊಳ್ಳುವುದಕ್ಕೆ ಅವರು ಕರೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com