ರಾಮ್ಪುರ; ಬಾಬ್ರಿ ಮಸೀದಿಗೆ ಎದುರಾಗಿದ್ದ ಪರಿಸ್ಥಿತಿಯೇ ತಾಜ್'ಮಹಲ್'ಗೂ ಎದುರಾಗಲಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರು ಬುಧವಾರ ಹೇಳಿದ್ದಾರೆ.
ಬಿಜೆಪಿ ಸಂಸದ ವಿನಯ್ ಕಟಿಯಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಬಾಬ್ರಿ ಮಸೀದಿಯನ್ನೇ ದ್ವಂಸಗೊಳಿಸಿದ್ದಾರೆ ಎಂದಾದರೆ, ದೇಶದಲ್ಲಿರುವ ಯಾವುದೇ ಕಟ್ಟಡ ಕೂಡ ಧರೆಗುರುಳಬಹುದು. ಒಂದಲ್ಲ ಒಂದು ದಿನ ತಾಜ್ ಮಹಲ್ ಕೂಡ ಧ್ವಂಸಗೊಂಡರೆ ಇದರಲ್ಲಿ ಆಶ್ಚರ್ಯಪಡಬೇಕಿಲ್ಲ ಎಂದುಹೇಳಿದ್ದಾರೆ.
ರಾಮ ಮಂದಿರದ ಹೆಸರಿನಲ್ಲಿ ಬಾಬ್ರಿ ಮಸೀದಿಯನ್ನೇ ಧ್ವಂಸಗೊಳಿಸಿದ್ದಾರೆ ಎಂದರೆ, ಇಂತಹ ಜನ ಏನನ್ನೂ ಬೇಕಾದರೂ ಮಾಡಬಲ್ಲರು. ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ದೇವಾಲಯವಿತ್ತು ಎಂದು ಮಸೀದಿಯನ್ನು ಧ್ವಂಸಗೊಳಿಸಲಾಗಿದ್ದು, ದೇಶದಲ್ಲಿರುವ ಯಾವುದೇ ಪ್ರಾರ್ಥನಾ ಮಂದಿರಗಳು ಇಂದು ಸುರಕ್ಷಿತವಲ್ಲ.
ದೇಗುಲ ಹಾಗೂ ಮಸೀದಿ ಇದ್ದಂತಹ ಸಂದರ್ಭದಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಗಳಿದ್ದವು. ಆದರೂ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು. ತಾಜ್ ಮಹಲ್'ಗೂ ಇಂತಹದ್ದೇ ಪರಿಸ್ಥಿತಿ ಎದುರಾಗಲಿದೆ. ತಾಜ್ ಮಹಲ್ ಅಂತರಾಷ್ಟ್ರೀಯವಾಗಿ ಗಮನ ಸೆಳೆದಿರುವುದರಿಂದ ಆ ಕಟ್ಟಡ ಇನ್ನೂ ಹಾಗೆಯೇ ಇದೆ ಎಂದು ತಿಳಿಸಿದ್ದಾರೆ.