ಪ್ರವಾಸಿಗರಿಗಾಗಿ ಇರುವ ಮಾರ್ಗದರ್ಶಕರ (ಗೈಡ್)ರು, ಟ್ರಾವೆಲ್ ಏಜೆನ್ಸಿಗಳು, ಹೋಟೆಲ್ ಗಳನ್ನು ಪ್ರತಿನಿಧಿಸುವ ಸಂಸ್ಥೆಗಳು ಆಗ್ರಾವನ್ನು ಗುರಿಯಾಗಿರಿಸಿಕೊಂಡು ನೀಡುವ ಹೇಳಿಕೆಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಇದೇ ವೇಳೆ ಮೊಘಲ್ ಇತಿಹಾಸಕಾರ ಪ್ರೊ. ಆರ್. ನಾಥ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಗಾಸಿಪ್ ಗಳನ್ನಾಧರಿಸಿ ಇತಿಹಾಸವನ್ನು ತಿರುಚಬಾರದು ಎಂದು ಮನವಿ ಮಾಡಿದ್ದರು.