ಗುಜರಾತ್ ಅತ್ಯಂತ ಅಮೂಲ್ಯ, ಎಂದಿಗೂ ಅದರ ಖರೀದಿ ಅಸಾಧ್ಯ: ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ

ಲಂಚ ಆರೋಪ ಹಿನ್ನಲೆಯಲ್ಲಿ ಕೇಂದ್ರದ ಆಡಳಿತಾರೂಢ ಸರ್ಕಾರದ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ವಾಗ್ದಾಳಿ ನಡೆಸಿದ್ದು, ಗುಜರಾತ್ ರಾಜ್ಯ ಅತ್ಯಂತ ಅಮೂಲ್ಯವಾದದ್ದು,...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ

ನವದೆಹಲಿ: ಲಂಚ ಆರೋಪ ಹಿನ್ನಲೆಯಲ್ಲಿ ಕೇಂದ್ರದ ಆಡಳಿತಾರೂಢ ಸರ್ಕಾರದ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ವಾಗ್ದಾಳಿ ನಡೆಸಿದ್ದು, ಗುಜರಾತ್ ರಾಜ್ಯ ಅತ್ಯಂತ ಅಮೂಲ್ಯವಾದದ್ದು, ಅದನ್ನು ಎಂದಿಗೂ ಖರೀದಿಸಲು ಸಾಧ್ಯವಿಲ್ಲ ಎಂದು ಸೋಮವಾರ ಹೇಳಿದ್ದಾರೆ. 

ಗುಜರಾತ್ ರಾಜ್ಯ ಅತ್ಯಂತ ಅಮೂಲ್ಯವಾದದ್ದು, ಅದನ್ನು ಎಂದಿಗೂ ಖರೀದಿಸಿಲ್ಲ, ಎಂದಿಗೂ ಖರೀದಿಸಬಾರದು... ಅದನ್ನು ಎಂದಿಗೂ ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಗುಜರಾತ್ ವಿಧಾನಸಭಾ ಚುನಾವಣೆ ಘೋಷಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಅಲ್ಲಿ ರಾಜಕೀಯ ಚದುರಂಗದಾಟ ಆರಂಭವಾಗಿದೆ. ಪಟೇಲ್ ಸಮುದಾಯದ ಮುಖಂಡರು ತಮಗೆ ಬಿಜೆಪಿ ಸೇರಲು 1 ಕೋಟಿ ರು.ಗಳ ಆಮಿಷ ಒಡ್ಡಿತ್ತು ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ. 

ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿಯ ವಕ್ತಾರ ನರೇಂದ್ರ ಪಟೇಲ್ ಅವರು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ತಮ್ಮನ್ನು ತಮ್ಮ ಬೆಂಬಲಿಗರು ಬಿಜೆಪಿ ಪಕ್ಷ ಸೇರುವಂತೆ ವರುಣ್ ಪಟೇಲ್ ಆಮಿಷ ಒಡ್ಡಿದ್ದರು. ಈ ಕಾರ್ಯ ಮಾಡಿದರೆ ತಮಗೆ ಒಂದು ಕೋಟಿ ನೀಡುವುದಾಗಿ ಅವರು ಹೇಳಿದ್ದರು. ಗಾಂಧಿನಗರ ಮತ್ತು ಶ್ರೀಕಮಲಂ ನಲ್ಲಿರುವ ಬಿಜೆಪಿ ಕಚೇರಿಗೆ ಕರೆದುಕೊಂಡು ಹೋಗಿದ್ದ ವರುಣ್ ಪಟೇಲ್, ಜೀತು ಭಾಯ್ ವಘಾನಿ ಮತ್ತು ಇತರೆ ಬಿಜೆಪಿ ಸಚಿವರನ್ನು ಭೇಟಿ ಮಾಡಿಸಿದ್ದರು ಎಂದು ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com