ಸಂಜ್ಞಾ ಭಾಷೆ ತಜ್ಞ ಜ್ಞಾನೇಂದ್ರ ಪುರೋಹಿತ್ ಅವರು ಮಾತನಾಡಿ, ಗೀತಾ ಪಾಕಿಸ್ತಾನದಲ್ಲಿದ್ದಾಗ ನನ್ನೊಂದಿಗೆ ವಿಡಿಯೋ ಕಾಲ್ ಮೂಲಕ ಸಂವಹನ ನಡೆಸುತ್ತಿದ್ದಳು. ಆಕೆಯ ಭಾಷೆಯನ್ನು ನೋಡಿದರೆ, ಆದರೆ ಜಾರ್ಖಂಡ್ ಅಥವಾ ತೆಲಂಗಾಣ ಮೂಲದವಳೆಂದು ಅನಿಸುತ್ತಿದೆ. ಪಾಕಿಸ್ತಾನದಲ್ಲಿದ್ದ ಸಂದರ್ಭದಲ್ಲಿಯೇ ವಾಟ್ಸ್ ಅಪ್ ಮೂಲಕವೇ ಆಕೆ ನನಗೆ ಪತ್ರಿಕೆಯೊಂದರ ಚಿತ್ರವೊಂದನ್ನು ನನಗೆ ಕಳುಹಿಸಿದ್ದಳು. ಪೇಪರ್ ನಲ್ಲಿ ಆಕೆ ಬಂದೊ ಎಂಬ ಪದವನ್ನು ಹಿಂದಿಯಲ್ಲಿ ಬರೆದಿದ್ದಳು. ಅಲ್ಲದೆ, ಆಕೆ ಗಡ್ಡಿ ಎಂದು ತನ್ನ ಹೆಸರನ್ನು ಬರೆದಿದ್ದಳು ಎಂದು ಹೇಳಿದ್ದಾರೆ.