ಕೇವಲ 24 ಗಂಟೆಗಳ ಅವಧಿಯಲ್ಲಿ ಬರೊಬ್ಬರಿ 9 ನವಜಾತ ಶಿಶುಗಳ ಸಾವನ್ನಪ್ಪಿರುವ ಘಟನೆ ಗುಜರಾತ್ ನ ಮಹಿಸಾಗರ ಜಿಲ್ಲೆಯಲ್ಲಿ ನಡೆದಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಈ ಸಾವುಗಳು ಶನಿವಾರ ಸಂಭವಿಸಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಪೈಕಿ ಐದು ಶಿಶುಗಳನ್ನು ಮಹಿಸಾಗರ ಜಿಲ್ಲೆಯ ಲೂನಾವಾಡ ಆಸ್ಪತ್ರೆ, ಸುರೇಂದ್ರನಗರ, ಗಾಂಧಿನಗರ ಜಿಲ್ಲೆಯ ಮನ್ಸಾ, ಅಹ್ಮದಾಬಾದ್ ಜಿಲ್ಲೆಯ ವಿರಾಮಗಾಮ ಹಾಗೂ ಸಬರಕಾಂತ ಜಿಲ್ಲೆ ಹಿಮ್ಮತ್ ನಗರದಿಂದ ಸ್ಥಳಾಂತರಿಸಲಾಗಿತ್ತು. ನಾಲ್ಕು ಮಕ್ಕಳು ಇದೇ ಸರ್ಕಾರಿ ಆಸ್ಪತ್ರೆಯಲ್ಲಿ ಜನ್ಮ ತಾಳಿದ್ದವು.