ಮದರಸಾಗಳಲ್ಲಿ ಎನ್'ಸಿಇಆರ್'ಟಿ ಪಠ್ಯಕ್ರಮ: ಸಿಎಂ ಯೋಗಿ ಸರ್ಕಾರ ಕೊಂಡಾಡಿದ ಕಾಂಗ್ರೆಸ್

ಮದರಸಾಗಳಲ್ಲಿ ಎನ್'ಸಿಇಆರ್'ಟಿ ಸಿದ್ದಪಡಿಸುವ ಪುಸ್ತಕಗಳನ್ನು ಪರಿಚಯಿಸಲು ಮುಂದಾಗಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋದಿ ಆದಿತ್ಯನಾಥ್ ಸರ್ಕಾರವನ್ನು ಕಾಂಗ್ರೆಸ್ ಮಂಗಳವಾರ ಕೊಂಡಾಡಿದೆ...
ಮುಖ್ಯಮಂತ್ರಿ ಯೋದಿ ಆದಿತ್ಯನಾಥ್
ಮುಖ್ಯಮಂತ್ರಿ ಯೋದಿ ಆದಿತ್ಯನಾಥ್
ನವದೆಹಲಿ: ಮದರಸಾಗಳಲ್ಲಿ ಎನ್'ಸಿಇಆರ್'ಟಿ ಸಿದ್ದಪಡಿಸುವ ಪುಸ್ತಕಗಳನ್ನು ಪರಿಚಯಿಸಲು ಮುಂದಾಗಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋದಿ ಆದಿತ್ಯನಾಥ್ ಸರ್ಕಾರವನ್ನು ಕಾಂಗ್ರೆಸ್ ಮಂಗಳವಾರ ಕೊಂಡಾಡಿದೆ. 
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು, ಎನ್'ಸಿಇಆರ್'ಟಿ ಪಠ್ಯಪುಸ್ತಕಗಳನ್ನು ಪರಿಚಯಿಸಲು ಮುಂದಾಗಿರುವ ಸರ್ಕಾರದ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ. ಮದರಸಾಗಳು ತಮ್ಮದೇ ಧಾರ್ಮಿಕ ಬೋಧನೆಗಳನ್ನು ಹೊರತುಪಡಿಸಿ ಆಧನಿಕ ಶಿಕ್ಷಣವನ್ನು ಬೋಧಿಸುತ್ತಿದ್ದಾರೆಂದು ನಾನು ಭಾವಿಸುತ್ತಿದ್ದೇನೆಂದು ಹೇಳಿದ್ದಾರೆ. 
ಎನ್'ಸಿಇಆರ್'ಟಿ ಪುಸ್ತಕಗಳು ಸಿಗುವಂತೆ ಮಾಡಬೇಕು. ಸರ್ಕಾರದ ನಿರ್ಧಾರದಿಂದ ಮದರಸಾಗಳಿಗೂ ಸಂತಸವಾಗಲಿದೆ. ಮದರಸಾಗಳಿಂದ ಹೊರಗೆ ಬರುವವರು ಮಸೀದಿಗಳಲ್ಲಿ ಕೇವಲ ಮೌಲ್ವಿಗಳಾಗುವುದರೊಂದಿಗೆ ಉದ್ಯೋಗ ಮಾಡುವಂತಹ ಸಾಮರ್ಥ್ಯವನ್ನು ಹೊಂದಿರುವವರಾಗುತ್ತದೆ. ಸರ್ಕಾರದ ನಿರ್ಧಾರ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. 
ಇದರಂತೆ ಬಿಜೆಪಿ ಕೂಡ ಉತ್ತರಪ್ರದೇಶ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಯಂತೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com