2012 ರ ಕಳ್ಳಭಟ್ಟಿ ದುರಂತದ ಆರೋಪಿಯೊಂದಿಗೆ ನಿತೀಶ್ ಸೆಲ್ಫಿ: ಜೆಡಿ(ಯು) ಕೆಂಗಣ್ಣು

2012 ರ ಬಿಹಾರದಲ್ಲಿ ನಡೆದಿದ್ದ ಕಳ್ಳಭಟ್ಟಿ ದುರಂತದ ಆರೋಪಿ ರಾಕೇಶ್ ಸಿಂಗ್ ಸೆಲ್ಫಿಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಇರುವುದು ಜೆಡಿ(ಯು) ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ.
ನಿತೀಶ್ ಕುಮಾರ್
ನಿತೀಶ್ ಕುಮಾರ್
Updated on
ಪಾಟ್ನಾ: 2012 ರ ಬಿಹಾರದಲ್ಲಿ ನಡೆದಿದ್ದ ಕಳ್ಳಭಟ್ಟಿ ದುರಂತದ ಆರೋಪಿ ರಾಕೇಶ್ ಸಿಂಗ್ ಸೆಲ್ಫಿಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಇರುವುದು ಜೆಡಿ(ಯು) ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ. 
ರಾಕೇಶ್ ಸಿಂಗ್ ಕಳ್ಳಭಟ್ಟಿ ಪ್ರಕರಣದಲ್ಲಿ ಆರೋಪ ಹೊತ್ತಿದ್ದು, ಮಾದ್ಯ ಮಾಫಿಯಾದೊಂದಿಗೆ ಶಾಮೀಲಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿರುವುದಾಗಿ ಜೆಡಿಯು ತಿಳಿಸಿದೆ. ರಾಕೇಶ್ ಸಿಂಗ್ ನಿತೀಶ್ ಕುಮಾರ್ ಮನೆಗೆ ತೆರಳಿದ್ದಾಗ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿತೀಶ್ ಕುಮಾರ್, " ಶಿಕ್ಷಕರೊಬ್ಬರ ಜೊತೆಯಲ್ಲಿ ಸಿಂಗ್ ಬಂದಿದ್ದರು. ಈ ವ್ಯಕ್ತಿಯ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ, ಸೆಲ್ಫಿ ಕುರಿತು ಪ್ರಶ್ನೆಗಳು ಉದ್ಭವವಾಗುತ್ತಿದ್ದಂತೆಯೇ ನಾವು ಆತನಿಂದ ಅಂತರ ಕಾಯ್ದುಕೊಂಡಿದ್ದೇವೆ ಎಂದು ನಿತೀಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. 
2012 ರಲ್ಲಿ ಕಳ್ಳಭಟ್ಟಿ ಸೇವಿಸಿ 29 ಜನರು ಮೃತಪಟ್ಟಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com