ಒಂದೆಡೆ ಉಗ್ರರು, ಮತ್ತೊಂದೆಡೆ ಪಾಪಿಸ್ತಾನ ಸೇನೆ: ಪಾಕ್ ಸ್ನೈಪರ್ ದಾಳಿಗೆ ಓರ್ವ ಯೋಧ ಹುತಾತ್ಮ!

ಅತ್ತ ಜಮ್ಮ ಮತ್ತು ಶ್ರೀನಗರ ಹೆದ್ದಾರಿಯಲ್ಲಿ ಉಗ್ರರು ದಾಳಿ ನಡೆಸಿರವಂತೆಯೇ ಇತ್ತ ಪೂಂಛ್ ನಲ್ಲಿ ಗಿಡಿ ನಿಯಂತ್ರಣ ರೇಖೆ ಬಳಿ ಗಸ್ತು ತಿರುಗುತ್ತಿದ್ದ ಓರ್ವ ಭಾರತೀಯ ಯೋಧನನ್ನು ಪಾಕಿಸ್ತಾನೆ ಕೊಂದು ಹಾಕಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಅತ್ತ ಜಮ್ಮ ಮತ್ತು ಶ್ರೀನಗರ ಹೆದ್ದಾರಿಯಲ್ಲಿ ಉಗ್ರರು ದಾಳಿ ನಡೆಸಿರವಂತೆಯೇ ಇತ್ತ ಪೂಂಛ್ ನಲ್ಲಿ ಗಿಡಿ ನಿಯಂತ್ರಣ ರೇಖೆ ಬಳಿ ಗಸ್ತು ತಿರುಗುತ್ತಿದ್ದ ಓರ್ವ ಭಾರತೀಯ ಯೋಧನನ್ನು ಪಾಕಿಸ್ತಾನೆ ಕೊಂದು ಹಾಕಿದೆ.
ಪಾಕಿಸ್ತಾನದ ಸ್ನೈಪರ್ ಯೋಧನೋರ್ವ ಎಲ್ ಒಸಿ ಬಳಿ ಕರ್ತವ್ಯ ಬಳಿ ಕರ್ತವ್ಯ ನಿರತನಾಗಿದ್ದ ವೇಳೆ ಆತನ ಮೇಲೆ ಗುಂಡು ಹಾರಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯೋಧನನ್ನು ಕ್ಯಾಂಪ್ ನಲ್ಲಿದ್ದ ಸೇನಾಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ.
ಜಮ್ಮುವಿನಿಂದ ಸುಮಾರು 250 ಕಿಲೋಮೀಟರ್ ದೂರದ ಪೂಂಚ್ ಜಿಲ್ಲೆಯ ಕೃಷ್ಣಘಾಟಿ ಎಂಬಲ್ಲಿ ಕಾವಲು ಕಾಯುತ್ತಿದ್ದ ಕಮಲ್‌ಜೀತ್ ಸಿಂಗ್ ಗುಂಡೇಟಿಗೆ ಬಲಿಯಾದವರು ಎಂದು ಗುರುತಿಸಲಾಗಿದೆ. 1988ರಲ್ಲಿ ಗಡಿಭದ್ರತಾ ಪಡೆ ಸೇರಿದ್ದ ಸಿಂಗ್ ಅವರು, ಪಂಜಾಬ್‌ನ ಭಟಿಂಡಾ ಜಿಲ್ಲೆಯ ಮಲ್ಕಾನಾ ಗ್ರಾಮದವರು ಎಂದು ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಪ್ರಕರಣ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗತ್ತಿದ್ದು, ಆಗಸ್ಟ್ 1 ರವರೆಗೂ ಪಾಕಿಸ್ತಾನ ಬರೊಬ್ಬರಿ 285 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಕಳೆದ ಇಡೀ ವರ್ಷ ಪಾಕಿಸ್ತಾನ ಸೇನೆ 228 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಆದರೆ ಈ ಬಾರಿ ಆಗಸ್ಟ್ ತಿಂಗಳ ವೇಳೆ ಬರೊಬ್ಬರಿ 285 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಈ ವರ್ಷ ಪಾಕಿಸ್ತಾನದ ದಾಳಿಗೆ ಒಟ್ಟು 9 ಯೋಧರು ಸಾವನ್ನಪ್ಪಿದ್ದು, 18 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಲ್ಲದೆ ಪಾಕಿಸ್ತಾನ ಸೇನಾ ಬೆಂಬಲವಿರುವ ಉಗ್ರರ ಬ್ಯಾಟ್ ಪಡೆ (ಬಾರ್ಡರ್ ಆಕ್ಷನ್ ಟೀಂ) 83 ಬಾರಿ ದಾಳಿ ಮಾಡಿದ್ದು, ಈ ವೇಳೆ 3 ಯೋಧರ ಸಾವನ್ನಪ್ಪಿ, 13 ಮಂದಿ ಗಾಯಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com