ಗೋರಕ್ ಪುರ ಆಸ್ಪತ್ರೆ ದುರಂತ: ಎಸ್ ಟಿಎಫ್ ನಿಂದ ಡಾ.ಕಫೀಲ್ ಖಾನ್ ಬಂಧನ!

ಉತ್ತರ ಪ್ರದೇಶದ ಗೋರಕ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಮಕ್ಕಳ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯ ಡಾ.ಕಫೀಲ್ ಖಾನ್ ನನ್ನು ಬಂಧಿಸಲಾಗಿದೆ.
ಡಾ.ಕಫೀಲ್ ಖಾನ್ (ಸಂಗ್ರಹ ಚಿತ್ರ)
ಡಾ.ಕಫೀಲ್ ಖಾನ್ (ಸಂಗ್ರಹ ಚಿತ್ರ)
ಲಖನೌ: ಉತ್ತರ ಪ್ರದೇಶದ ಗೋರಕ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಮಕ್ಕಳ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯ ಡಾ.ಕಫೀಲ್ ಖಾನ್ ನನ್ನು ಬಂಧಿಸಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ಪಡೆ (ಎಸ್ ಟಿಎಫ್) ಅಧಿಕಾರಿಗಳು ಗೋರಕ್ ಪುರದಲ್ಲಿ ಇಂದು ಬೆಳಗ್ಗೆ ಕಫೀಲ್ ಖಾನ್ ನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆಯಷ್ಟೇ ಎಸ್ ಟಿಎಫ್ ಅಧಿಕಾರಿಗಳು ದುರಂತ ಸಂಬಂಧ ಆಸ್ಪತ್ರೆಯ 7 ಮಂದಿ ವೈದ್ಯರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಇದಲ್ಲದೆ ವೈದ್ಯರಾದ ಡಾ.ಸತೀಶ್‌, ಡಾ.ಗಜಾನನ್‌ ಜೈಸ್ವಾಲ್‌, ಲೆಕ್ಕಾಧಿಕಾರಿ ಸುಧೀರ್‌ ಪಾಂಡೆ, ಸಹಾಯಕ ಗುಮಾಸ್ತ ಸಂಜಯ್‌ ಕುಮಾರ್‌ ತ್ರಿಪಾಠಿ ,ಆಕ್ಸಿಜನ್‌ ಸರಬರಾಜು ಮಾಡುತ್ತಿದ್ದ ಉದಯ್‌ ಪ್ರತಾಪ್‌ ಸಿಂಗ್‌ ಮತ್ತು ಮನೀಷ್‌ ಭಂಡಾರಿ ಅವರ ವಿರುದ್ದ ವಾರಂಟ್‌ ಹೊರಡಿಸಲಾಗಿತ್ತು. ಇದರ ಬೆನ್ನಲ್ಲೇ ವೈದ್ಯ ಕಫೀಲ್ ಖಾನ್ ನನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಗೋರಕ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿ ಕಳೆದ ತಿಂಗಳು ಆಕ್ಸಿಜನ್ ಕೊರತೆಯಿಂದಾಗಿ ಸುಮಾರು 70ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ್ದರು. ಮೆದುಳು ಸೋಂಕಿನಿಂದ ವಿವಿಧ ರಾಜ್ಯಗಳಿಂದ ಬಿಆರ್ ಡಿ ಆಸ್ಪತ್ರೆಯಲ್ಲಿ ನೂರಾರು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದರು.
ಇನ್ನು ಪ್ರಕರಣ ಸಂಬಂಧ ಈಗಾಗಲೇ ಆಸ್ಪತ್ರೆಯ ಮಾಜಿ ಪ್ರಾಂಶುಪಾಲರನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com