ಲೆಫ್ಟಿನೆಂಟ್ ಉಮರ್ ಫಯಾಜ್ ಕೊಂದಿದ್ದ ಉಗ್ರ ಎನ್ ಕೌಂಟರ್ ಗೆ ಬಲಿ!

ಭಾರತೀಯ ಯೋಧ ಲೆಫ್ಟಿನೆಂಟ್ ಉಮರ್ ಫಯಾಜ್ ರನ್ನು ಅಪಹರಿಸಿ ಕೊಂದು ಹಾಕಿದ್ದ ಎಲ್ ಇಟಿ ಉಗ್ರ ಇಶ್ಫಾಕ್ ಪದ್ದರ್ ನನ್ನು ಶನಿವಾರ ಕುಲ್ಗಾಮ್ ನಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ...
ಲೆಫ್ಟಿನೆಂಟ್ ಉಮರ್ ಫಯಾಜ್ ಅಂತ್ಯಕ್ರಿಯೆ (ಸಂಗ್ರಹ ಚಿತ್ರ)
ಲೆಫ್ಟಿನೆಂಟ್ ಉಮರ್ ಫಯಾಜ್ ಅಂತ್ಯಕ್ರಿಯೆ (ಸಂಗ್ರಹ ಚಿತ್ರ)
ಶ್ರೀನಗರ: ಭಾರತೀಯ ಯೋಧ ಲೆಫ್ಟಿನೆಂಟ್ ಉಮರ್ ಫಯಾಜ್ ರನ್ನು ಅಪಹರಿಸಿ ಕೊಂದು ಹಾಕಿದ್ದ ಎಲ್ ಇಟಿ ಉಗ್ರ ಇಶ್ಫಾಕ್ ಪದ್ದರ್ ನನ್ನು ಶನಿವಾರ ಕುಲ್ಗಾಮ್ ನಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ.
ಕುಲ್ಗಾಮ್ ನ ತಂತ್ರಿಪೋರಾ ಗ್ರಾಮದ ಬಳಿ ನಡೆದ ಸೇನಾ ಕಾರ್ಯಾಚರಣೆ ವೇಳೆ ಇಶ್ಫಾಕ್ ಪದ್ದರ್ ನನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ ಎಂದು ತಿಳಿದುಬಂದಿದೆ. ಕುಖ್ಯಾತ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಇಶ್ಫಾಕ್ ಪದ್ದರ್ ಕಳೆದ ಮೇ 10ರಂದು ಬತ್ಪುರ ಗ್ರಾಮದಲ್ಲಿ 62 ರಾಷ್ಟ್ರೀಯ ರೈಫಲ್ಸ್ ವಿಭಾಗ 22 ವರ್ಷದ ಯೋಧ ಉಮರ್ ಫಯಾಜ್ ರನ್ನು ಅಪಹರಣ ಮಾಡಲಾಗಿತ್ತು. ಬಳಿಕ ಯೋಧನನ್ನು ಭೀಕರವಾಗಿ ಕೊಲೆಗೈದು ಬಿಸಾಡಲಾಗಿತ್ತು.
ಶೋಪಿಯಾನ್ ನ ಹರ್ಮೆನ್ ಪ್ರದೇಶದಲ್ಲಿ ಫಯಾಜ್ ಮೃತದೇಹ ಪತ್ತೆಯಾಗಿತ್ತು. ಇದೀಗ ಈ ಹತ್ಯೆಗೈದವರ ಪೈಕಿ ಓರ್ವನಾದ ಲಷ್ಕರ್ ಉಗ್ರ ಸಂಘನೆಯ ಕಮಾಂಡರ್ ಇಶ್ಫಾಕ್ ಪದ್ದರ್ ನನ್ನು ಹತ್ಯೆಗೈಯ್ಯಲಾಗಿದೆ. ಇನ್ನು ಕುಲ್ಗಾಮ್ ನಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com