ರಾಮ್ ರಹೀಮ್ ಬಂಧನದ ಬಳಿಕ ಡೇರಾ ಆಶ್ರಮದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಪೊಲೀಸರು

ಅತ್ಯಾಚಾರ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾದ ಬಳಿಕ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಜೈಲು ಸೇರಿದ ಬಳಿಕ ಡೇರಾ ಸಚ್ಚಾ ಸೌದ ಆಶ್ರಮದಲ್ಲಿ ಪೊಲೀಸರು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು...
ರಾಮ್ ರಹೀಮ್ ಬಂಧನದ ಬಳಿಕ ಡೇರಾ ಆಶ್ರಮದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಪೊಲೀಸರು
ರಾಮ್ ರಹೀಮ್ ಬಂಧನದ ಬಳಿಕ ಡೇರಾ ಆಶ್ರಮದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಪೊಲೀಸರು
ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾದ ಬಳಿಕ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಜೈಲು ಸೇರಿದ ಬಳಿಕ ಡೇರಾ ಸಚ್ಚಾ ಸೌದ ಆಶ್ರಮದಲ್ಲಿ ಪೊಲೀಸರು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. 
ರಾಮ್ ರಹೀಮ್ ಬಂಧನದ ಬಳಿಕ ಆಗಸ್ಟ್ 25 ರಿಂದಲೂ ಸುಧೀರ್ಘವಾಗಿ ಆಶ್ರಮದ ಮೇಲೆ ದಾಳಿ ನಡೆಸಿರುವ ಹರಿಯಾಣ ಪೊಲೀಸರು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಗುರ್ಮಿತ್ ಬಂಧನದ ಬಳಿಕ ಆಶ್ರಮದ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ 9ಎಂಎಂ ಪಿಸ್ತೂಲ್, ಡಬಲ್ ಬ್ಯಾರೆಲ್ ರೈಫಲ್ಸ್ ಗಳು, ಕಾರ್ಬೈನ್ ಗಳು ಹಾಗೂ ಸ್ಫೋಟಕ ವಸ್ತುಗಳು ಪಡೆದುಕೊಳ್ಳಲಾಗಿತ್ತು. ಡೇರಾ ಆಶ್ರಮದಲ್ಲಿಯೇ 3-4 ದಿನಗಲ ಕಾಲ ಉಳಿದುಕೊಳ್ಳಲಾಗಿತ್ತು. ಈ ವೇಳೆ ಕಾನೂನು ಕ್ರಮ ಎದುರುವುದಕ್ಕೂ ಮುನ್ನ ಎಲ್ಲಾ ಶಸ್ತ್ರಾಸ್ತ್ರಗಳನ್ನು ವಶಕ್ಕೆ ನೀಡುವಂತೆ ಗುರ್ಮಿತ್ ಬೆಂಬಲಿಗರಲ್ಲಿ ಮನವಿ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. 
ರಾಮ್ ರಹೀಮ್ ಬೆಂಬಲಿಗರಿಂದ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲು ಸಾಕಷ್ಟು ಅವಕಾಶಗಳಿತ್ತು. ಈಗಲೂ ಆಶ್ರಮದಲ್ಲಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿರುವ ಜನರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಗುರ್ಮಿತ್ ಸಂಬಂಧಿ ಭುಪೇಂದರ್ ಸಿಂಗ್ ಬಗ್ಗೆ ಮಾತನಾಡಿರುವ ಅವರು, ಡೇರಾದಲ್ಲಿರುವ ಎಲ್ಲಾ ಬೆಂಬಲಿಗರೂ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ. ಮಹಿಳಾ ಬೆಂಬಲಿಗರ ಬಳಿಯೂ ಶಸ್ತ್ರಾಸ್ತ್ರಗಳಿವೆ. ಭವಿಷ್ಯದಲ್ಲಿಯೂ ಈ ರೀತಿಯ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ. ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತದೆ ಎಂದಿದ್ದಾರೆ. 
14,000 ದಿಂದ 20,000 ಹಸಿರು ಪಡೆ ಕಮಾಂಡೋಗಳು ಡೇರಾದಲ್ಲಿದ್ದು, ಶಸ್ತ್ರಾಸ್ತ್ರಗಳನ್ನು ಹೇಗೆ ಬಳಕೆ ಮಾಡಬೇಕೆಂಬುದರ ಬಗ್ಗೆ ಅವರಿಗೆ ತರಬೇತಿಗಳನ್ನು ನೀಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com