ಆರ್ ಎಸ್ಎಸ್ ಮುಖಂಡ ಮೋಹನ್ ಭಾಗ್ವತ್ ಅವರಿಗೆ ಅನುಮತಿ ನಿರಾಕರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮುಂದಿನ ವಾರ ಪಕ್ಷದ ಪ್ರಮುಖ ರ್ಯಾಲಿಯೊಂದರಲ್ಲಿ ಭಾಗಿಯಾಗಬೇಕಿತ್ತು. ನೇತಾಜಿ ಇಂಡೋರ್ ಸ್ಟೇಡಿಯಂ ನಲ್ಲಿ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಿದ್ದ ಬಿಜೆಪಿ ಸೆ.10 ಅಥವಾ 13 ಕ್ಕೆ ಸ್ಥಳವನ್ನು ಕಾಯ್ದಿರಿಸಲು ಕೇಳಿತ್ತು. ಸುಮಾರು 12,000 ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ 27-30 ರಂದು ಹೊರತುಪಡಿಸಿ ಎಲ್ಲಾ ದಿನಾಂಕಗಳಲ್ಲಿಯೂ ಕಾರ್ಯಕ್ರಮ ನಿಗದಿಯಾಗಿದೆ ಎಂಬ ಉತ್ತರ ದೊರೆತಿದೆ.