ಈ ಬಗ್ಗೆ ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಹತ್ಯೆ ಮೂಲಕ ಸತ್ಯವನ್ನು ಮೌನವಾಗಿಸಲು ಸಾಧ್ಯವಿಲ್ಲ. ಗೌರಿ ಲಂಕೇಶ್ ನಮ್ಮ ಮನದಲ್ಲಿದ್ದು, ದೇವರು ಅವರ ಕುಟುಂಬಸ್ಥರಿಗೆ ಗೌರಿ ಲಂಕೇಶ್ ಅವರ ಸಾವಿನ ನೋವನ್ನು ತಡೆದುಕೊಳ್ಳು ಶಕ್ತಿ ನೀಡಲಿ. ತಪ್ಪಿತಸ್ಥಿರಿಗೆ ಖಂಡಿತಾ ಶಿಕ್ಷೆಯಾಗಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.