ಗುರುಗಾಂವ್ ಶಾಲಾ ಬಾಲಕನ ಹತ್ಯೆ ಪ್ರಕರಣ: ತನಿಖೆಗೆ ಸಿಬಿಎಸ್‌ಸಿ ಸೂಚನೆ

ದೇಶದಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿರುವ ಗುರುಗಾಂವ್ ರಿಯಾನ್ ಇಂಟರ್'ನ್ಯಾಷನಲ್ ಶಾಲಾ ಬಾಲಕನ ಹತ್ಯೆ ಪ್ರಕರಣವನ್ನು ತನಿಖೆ ನಡೆಸುವಂತೆ ಸಿಬಿಎಸ್‌ಸಿ (ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ)...
ರಿಯಾನ್ ಇಂಟರ್ ನ್ಯಾಷನಲ್ ಶಾಲೆ, ಗುರುಗಾಂವ್
ರಿಯಾನ್ ಇಂಟರ್ ನ್ಯಾಷನಲ್ ಶಾಲೆ, ಗುರುಗಾಂವ್
Updated on
ನವದೆಹಲಿ: ದೇಶದಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿರುವ ಗುರುಗಾಂವ್ ರಿಯಾನ್
ಇಂಟರ್'ನ್ಯಾಷನಲ್ ಶಾಲಾ ಬಾಲಕನ ಹತ್ಯೆ ಪ್ರಕರಣವನ್ನು ತನಿಖೆ ನಡೆಸುವಂತೆ ಸಿಬಿಎಸ್‌ಸಿ (ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ) ಅಧಿಕಾರಿಗಳಿಗೆ ಭಾನುವಾರ ಸೂಚನೆ ನೀಡಿದೆ. 
ಬಾಲಕನ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಅಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ರಚನೆ ರಚನೆ ಮಾಡಿರುವ ಸಿಬಿಎಸ್‌ಸಿ, ಶಾಲಾ ಆಡಳಿತ ಮಂಡಳಿತ ವೈಫಲ್ಯಗಳ ಕುರಿತಂತೆ ತನಿಖೆ ನಡೆಸುವಂತೆ ಸೂಚನೆ ಮಾಡಿದೆ ಎಂದು ತಿಳಿದುಬಂದಿದೆ. 
ಶಾಲಾ ಅಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಘಟನೆ ನಡೆದಿದ್ದೆಯೋ, ಭದ್ರತೆ ಕುರಿತಂತೆ ಸಿಬಿಎಸ್‌ಸಿ ನೀಡಿದ್ದ ಕಾನೂನುಗಳನ್ನು ಶಾಲೆ ಪಾಲಿಸುತ್ತಿದೆಯೇ, ಘಟನೆ ಬಳಿಕ ಪೊಲೀಸರಿಗೆ, ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ  ಶಾಲೆ ಮಾಹಿತಿ ನೀಡಿತ್ತೇ ಎಂಬೆಲ್ಲಾ ಆಯಾಮಗಳಲ್ಲೂ ಅಧಿಕಾರಿಗಳು ತನಿಖೆ ನಡೆಸಲಿದ್ದು, ತನಿಖೆ ಬಳಿಕ ವರದಿ ಸಲ್ಲಿಕೆ ಮಾಡಲಿದೆ. 
ಸಿಬಿಎಸ್ ಸಿ ಸೂಚನೆಯಂತೆಯೇ ಅಧಿಕಾರಿಗಳು ಈಗಾಗಲೇ ತನಿಖೆಯನ್ನು ಆರಂಭಿಸಿದ್ದು, ಘಟನೆ ಕುರಿತಂತೆ 2 ದಿನಗಳೊಳಗಾಗಿ, ಎಫ್ಐಆರ್ ಪ್ರತಿಯೊಂದಿಗೆ ವರದಿ ಸಲ್ಲಿಸುವಂತೆ ಶಾಲಾ ಆಡಳಿತ ಮಂಡಳಿಗೆ ಸೂಚನೆ ನೀಡಿದೆ. ಇದರ ಜೊತೆಜೊತೆಗೆ ಹರಿಯಾಣ ಸರ್ಕಾರದ ಶಿಕ್ಷಣ ಇಲಾಖೆ ಕೂಡ ತನಿಖೆಗೆ ಆದೇಶಿಸಿದ್ದು, ಸೋಮವಾರದೊಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. 
ಕಳೆದ ಶುಕ್ರವಾರ ರಿಯಾನ್ ಇಂಟರ್ ನ್ಯಾಷನಲ್ ಶಾಲೆ ಶೌಚಾಲಯದಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಳಿಕ ಕುತ್ತಿಗೆ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಶಾಲಾ ವಾಹನದ ನಿರ್ವಾಹಕನೇ ಈ ಕುಕೃತ್ಯವನ್ನು ಎಸಗಿದ್ದಾನೆಂದು ಹೇಳಲಾಗುತ್ತಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com