ಪ್ರಧಾನಿ ಮೋದಿ ಚಿತ್ರ ಬಿಡಿಸಿದ್ದಕ್ಕೆ ಮುಸ್ಲಿಂ ಮಹಿಳೆಯನ್ನು ಮನೆಯಿಂದ ಹೊರಗೆ ಹಾಕಿದ ಕುಟುಂಬಸ್ಥರು

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರ ಬಿಡಿಸಿದ ಕಾರಣಕ್ಕೆ ಮುಸ್ಲಿಂ ಮಹಿಳೆಯೊಬ್ಬರನ್ನು ಮನೆಯಿಂದ ಹೊರಗೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
ಬಲಿಯಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರ ಬಿಡಿಸಿದ ಕಾರಣಕ್ಕೆ ಮುಸ್ಲಿಂ ಮಹಿಳೆಯೊಬ್ಬರನ್ನು ಮನೆಯಿಂದ ಹೊರಗೆ ಹಾಕಿರುವ ಪ್ರಕರಣವೊಂದು ಭಾನುವಾರ ಬೆಳಕಿಗೆ ಬಂದಿದೆ. 
ಉತ್ತರಪ್ರದೇಶದ ಬಲಿಯಾ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರಗಳನ್ನು ಬಿಡಿಸಿದ ಕಾರಣಕ್ಕೆ ಆಕೆಯನ್ನು ಮನೆಯಿಂದ ಹೊರಗೆ ಹಾಕಿರುವುದಾಗಿ ವರದಿಗಳು ತಿಳಿಸಿವೆ. ಕಳೆದ ವರ್ಶ ನವೆಂಬರ್ ತಿಂಗಳಿನಲ್ಲಿ ಬಲಿಯಾ ಗ್ರಾಮದ ನಿವಾಸಿಯಾಗಿರುವ ಮೊಹಮ್ಮದ್ ಶಂಶ್ಮೀರ್ ಪುತ್ರನೊಂದಿಗೆ ಪರ್ವೇಜ್ ಖಾನ್ ಎಂಬುವವರು ವಿವಾಹವಾಗಿದ್ದರು. 

ಇದರಂತೆ ಕೆಲ ದಿನಗಳ ಹಿಂದೆ ಪರ್ವೇಜ್ ಖಾನ್ ಅವರು ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರ ಚಿತ್ರಗಳನ್ನು ಬಿಡಿಸಿದ್ದಳು. ಇದನ್ನು ನೋಡಿದ ಆಕೆಯ ಗಂಡ ಹಾಗೂ ಮನೆಯವರು ಪರ್ವೇಜ್ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದೆ, ಇದೀಗ ಘಟನೆ ಸಂಬಂಧಿಸಿದಂತೆ ಮಹಿಳೆ ಸಿಕಂದರ್ಪೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com