ಆರ್ಯವೈಶ್ಯ ಸಮಾಜದಿಂದ ಜೀವ ಬೆದರಿಕೆ ಆರೋಪ, ಖ್ಯಾತ ಲೇಖಕ ಕಂಚ ಐಲಯ್ಯರಿಂದ ದೂರು!

ಆಂಧ್ರ ಪ್ರದೇಶದ ಖ್ಯಾತ ದಲಿತ ಚಿಂತಕ ಹಾಗೂ ಲೇಖಕ ಕಂಚ ಐಲಯ್ಯ ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಹೈದರಾಬಾದ್: ಆಂಧ್ರ ಪ್ರದೇಶದ ಖ್ಯಾತ ದಲಿತ ಚಿಂತಕ ಹಾಗೂ ಲೇಖಕ ಕಂಚ ಐಲಯ್ಯ ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಹೈದರಾಬಾದ್ ನ ಉಸ್ಮಾನಿಯಾ ವಿಶ್ವ ವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಐಲಯ್ಯ ಅವರು, ಕಳೆದ ಕೆಲವು ದಿನಗಳಿಂದ ಆರ್ಯ ವೈಶ್ಯ ಸಮಾಜದಿಂದ ಬೆದರಿಕೆ ಕರೆಗಳು ಬರುತ್ತಿವೆ. ದೂರವಾಣಿ  ಕರೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು  ಐಲಯ್ಯ ಹೇಳಿದ್ದಾರೆ. ಐಲಯ್ಯ ಅವರ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 506 (ಅಪರಾಧ ಬೆದರಿಕೆ) ಅಡಿಯಲ್ಲಿ ಅನಾಮಧೇಯ  ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆರ್ಯ ವೈಶ್ಯರ ಕೆಂಗಣ್ಣಿಗೆ ಕಾರಣವಾಗಿತ್ತು ಆ ಪುಸ್ತಕ
ಇನ್ನು ಇತ್ತೀಚೆಗೆ ಲೇಖಕ ಕಂಚ ಐಲಯ್ಯ ಅವರು ಪುಸ್ತಕವೊಂದನ್ನು ಹೊರತಂದಿದ್ದರು. ಈ ಪುಸ್ತಕವೇ ಇದೀಗ ವಿವಾದಕ್ಕೆ ಕಾರಣವಾಗಿದ್ದು, "ಸಾಮಾಜಿಕ ಸ್ಮಗ್ಲರ್ಲು ಕೋಮಟೋಳ್ಳು" (ವೈಶ್ಯರು ಸಾಮಾಜಿಕ ಸ್ಮಗ್ಲರ್ ಗಳು) ಎಂಬ  ಪುಸ್ತಕಕ್ಕೆ ಆಂಧ್ರ ಪ್ರದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆರ್ಯವೈಶ್ಯರನ್ನು ಲೇಖಕ ಕಂಚ ಐಲಯ್ಯ ನಿಂದಿಸಿದ್ದಾರೆ ಎಂದು ಆರೋಪಿಸಿ ವೈಶ್ಯರು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಐಲಯ್ಯ ಅವರ ಪ್ರತಿಕೃತಿ ದಹಿಸಿ,  ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅಂತೆಯೇ ಈ ಕೂಡಲೇ ಆ ವಿವಾದಾತ್ಮಕ ಪುಸ್ತಕವನ್ನು ಮಾರುಕಟ್ಟೆಯಿಂದ ಹಿಂಪಡೆಯಬೇಕು ಮತ್ತು ಆ ಪುಸ್ತಕವನ್ನು ನಿಷೇಧಿಸಬೇಕು ಎಂದು  ಆಗ್ರಹಿಸಿದ್ದಾರೆ. ಅಲ್ಲದೆ ಸಮಾಜವನ್ನು ನಿಂದಿಸಿದ್ದಕ್ಕಾಗಿ ಮತ್ತು ತಮ್ಮ ಸಾಂಸ್ಕೃತಿಕ ಮನೋಭಾವನೆಗಳಿಗೆ ಧಕ್ಕೆ  ಪ್ರಕರಣದಡಿಯಲ್ಲಿ ಲೇಖಕ ಐಲಯ್ಯ ವಿರುದ್ಧ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.
ಇನ್ನು ಈ ಹಿಂದೆ ಮಾಂಸಾಹಾರ ಸೇವಿಸುವ ದಲಿತರನ್ನು ಬೆಂಬಲಿಸುವ ನಿಟ್ಟಿನಲ್ಲಿ ಮಾತನಾಡಿದ್ದ ಲೇಖಕ ಐಲಯ್ಯ, ಸಸ್ಯಾಹಾರ ವಾದಗಳು ದೇಶ ವಿರೋಧಿ ನೀತಿ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com