ಸಿಎಂ ಬದಲಾಗದಿದ್ದರೆ, ಇಡೀ ಸರ್ಕಾರವನ್ನೇ ಉರುಳಿಸಲು ಸಿದ್ಧ: ಟಿಟಿವಿ ದಿನಕರನ್ ಎಚ್ಚರಿಕೆ

ತಮಿಳುನಾಡು ಸಿಎಂ ಪಳನಿಸ್ವಾಮಿ ಅವರನ್ನು ಬದಲಿಸದಿದ್ದರೆ ಇಡೀ ಸರ್ಕಾರವನ್ನು ಉರುಳಿಸುವುದಾಗಿ ಎಐಎಡಿಎಂಕೆ ಪಕ್ಷದ ಉಚ್ಛಾಟಿತ ಮುಖಂಡ ಟಿಟಿವಿ ದನಕರನ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ತಮಿಳುನಾಡು ಸಿಎಂ ಪಳನಿಸ್ವಾಮಿ ಅವರನ್ನು ಬದಲಿಸದಿದ್ದರೆ ಇಡೀ ಸರ್ಕಾರವನ್ನು ಉರುಳಿಸುವುದಾಗಿ ಎಐಎಡಿಎಂಕೆ ಪಕ್ಷದ ಉಚ್ಛಾಟಿತ ಮುಖಂಡ ಟಿಟಿವಿ ದನಕರನ್ ಹೇಳಿದ್ದಾರೆ.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಟಿಟಿವಿ ದಿನಕರನ್, ಎಐಎಡಿಎಂಕೆ ಪಕ್ಷದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಕಿದ್ದರೂ ಅದು ಪ್ರಧಾನ ಕಾರ್ಯದರ್ಶಿಗಳು ಮಾತ್ರ..ಹೀಗಾಗಿ ಪ್ರಸ್ತುತ ಪಕ್ಷದ ಪ್ರಧಾನ  ಕಾರ್ಯದರ್ಶಿಯಾಗಿರುವ ವಿಕೆ ಶಶಿಕಲಾ ಅವರ ಅನುಪಸ್ಥಿತಿಯಲ್ಲಿ ಪಕ್ಷ ಯಾವುದೇ ನಿರ್ಣಯ ಕೈಗೊಳ್ಳುವಂತಿಲ್ಲ. ಒಂದು ವೇಳೆ ನಿಯಮಾವಳಿಗೆ ವಿರುದ್ಧವಾಗಿ ನಿರ್ಣಯ ಕೈಗೊಂಡರೆ ಸರ್ಕಾರ ಉರುಳಬಹುದು ಎಂದು ಎಚ್ಚರಿಕೆ  ನೀಡಿದ್ದಾರೆ.
ಅಂತೆಯೇ ಸಿಎಂ ಪಳನಿಸ್ವಾಮಿ ಬದಲಾವಣೆಗೆ ಆಗ್ರಹಿಸಿರುವ ದಿನಕರನ್, ಒಂದು ವೇಳೆ ಸಿಎಂ ಬದಲಾಗದಿದ್ದರೆ ಇಡೀ ಸರ್ಕಾರವನ್ನೇ ಉರುಳಿಸಲೂ ಕೂಡ ತಾವು ಯೋಚಿಸುವುದಿಲ್ಲ. ತಮ್ಮ ಬೆಂಬಲಿಗ ಶಾಸಕರೂ ಕೂಡ ಸಿಎ  ಪಳನಿಸ್ವಾಮಿ ವಿರುದ್ಧ ಅವಿಶ್ವಾಸ ಹೊಂದಿದ್ದು, ಅವರ ಬದಲಾವಣೆಗೆ ಆಗ್ರಹಿಸಿದ್ದಾರೆ.  ಅಂತೆಯೇ "ಅನಧಿಕೃತ" ಎಐಎಡಿಎಂಕೆ ಪಕ್ಷದ ಸಾಮಾನ್ಯಸಭೆಯಲ್ಲಿ ಪಾಲ್ಗೊಳ್ಳುವ ಶಾಸಕ ಹಾಗೂ ಮುಖಂಡರ ವಿರುದ್ಧವೂ ಕಠಿಣ ಕ್ರಮ  ಕೈಗೊಳ್ಳುತ್ತೇವೆ ಎಂದು ದಿನಕರನ್ ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಅಥವಾ ಅವರ ಅನುಪಸ್ಥಿತಿಯಲ್ಲಿ ಪಕ್ಷದ ಉಪ ಕಾರ್ಯದರ್ಶಿಗಳು ಮಾತ್ರ ಸಾಮಾನ್ಯ ಸಭೆ ಕರೆಯಬಹುದಾಗಿದೆ. ಹೀಗಾಗಿ ಪಳನಿಸ್ವಾಮಿ ಹಾಗೂ ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ನಡೆಯುವ ಸಭೆಗೆ  ಯಾವುದೇ ಮಾನ್ಯತೆ ಇಲ್ಲ ಎಂದೂ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com