'ಲಂಚ ತಗೊಳ್ಳಿ, ಪರವಾಗಿಲ್ಲ.. ಆದರೆ..': ಉತ್ತರ ಪ್ರದೇಶ ಡಿಸಿಎಂ ವಿವಾದಾತ್ಮಕ ಹೇಳಿಕೆ

ಸಿಎಂ ಯೋಗಿ ಆದಿತ್ಯಾನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಭ್ರಷ್ಟಾಚಾರ ವಿರೋಧಿ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದರೆ, ಇದೀಗ ಅದೇ ಸರ್ಕಾರ ಪ್ರಭಾವಿ ಸಚಿವರೊಬ್ಬರು ಲಂಚದ ಕುರಿತು ಮಾತನಾಡಿ ವಿವಾದಕ್ಕೆ ಕಾರಣರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಲಖನೌ: ಸಿಎಂ ಯೋಗಿ ಆದಿತ್ಯಾನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಭ್ರಷ್ಟಾಚಾರ ವಿರೋಧಿ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದರೆ, ಇದೀಗ ಅದೇ ಸರ್ಕಾರ ಪ್ರಭಾವಿ ಸಚಿವರೊಬ್ಬರು ಲಂಚದ ಕುರಿತು ಮಾತನಾಡಿ ವಿವಾದಕ್ಕೆ ಕಾರಣರಾಗಿದ್ದಾರೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ಉತ್ತರ ಪ್ರದೇಶದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು, ಅಧಿಕಾರಿಗಳ ಲಂಚಬಾಕತನದ ವಿರುದ್ಧ ಕಿಡಿಕಾರಿದ್ದಾರೆ. ಆದರೆ  ಅಧಿಕಾರಿಗಳ ವಿರುದ್ಧ ಹರಿಹಾಯುವ ಭರದಲ್ಲಿ ಲಂಚದ ಪರವಾಗಿ ಮಾತನಾಡಿ ಇದೀಗ ವಿಪಕ್ಷಗಳಿಗೆ ಆಹಾರವಾಗಿದ್ದಾರೆ. ಭಾನುವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಕೇಶವ್ ಪ್ರಸಾದ್ ಮೌರ್ಯ, “ಲಂಚ  ಪಡೆಯಿರಿ.. ಆದರೆ ಅದು ನಿಮ್ಮ ಆಹಾರದಲ್ಲಿರುವ ಉಪ್ಪಿನ ಪ್ರಮಾಣದಷ್ಟ ಮಾತ್ರ ಇರಲಿ” ಎಂದಿದ್ದಾರೆ. ಅಂತೆಯೇ ಲಂಚವನ್ನು ಮಿತವಾಗಿ ತೆಗೆದುಕೊಳ್ಳಿ.. ಎಂದು ಹೇಳಿರುವ ಅವರ ಹೇಳಿಕೆ ಇದೀಗ ವ್ಯಾಪಕ ವೈರಲ್ ಆಗಿದೆ..
ಉತ್ತರ ಪ್ರದೇಶದ ಭ್ರಷ್ಟ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಕೇಶವ್ ಪ್ರಸಾದ್ ಮೌರ್ಯ, "ಕಂಟ್ರಾಕ್ಟರ್ ಗಳು ತಾವು ಮಾಡುವ ರಸ್ತೆ ನಿರ್ಮಾಣದಂತಹ ಕಾರ್ಯಗಳಿಗೆ ಸರ್ಕಾರದಿಂದ ಹಣ ಪಡೆಯುತ್ತಾರೆ. ಆದರೆ ಕಳಪೆ  ಕಾಮಗಾರಿ ಮಾಡಿ ಜನರ ಹಣವನ್ನು ಲೂಟಿ ಮಾಡಬಹುದು ಎಂದು ಮಾತ್ರ ಭಾವಿಸಬೇಡಿ..ನಿಮ್ಮಂತಹವರನ್ನು ನಮ್ಮ ಸರ್ಕಾರ ಸಹಿಸಿಕೊಳ್ಳುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿ ಕೂಡ ಬಿಸಿನೆಸ್ ಮಾಡುವುದು ಹಣಕ್ಕಾಗಿ ಮತ್ತು  ಲಾಭಕ್ಕಾಗಿ. ಹೀಗಾಗಿ ಹಣ ಸಂಪಾದಿಸಿ ಆದರೆ ಲೂಟಿ ಮಾಡಬೇಡಿ".
“ಗುತ್ತಿಗೆದಾರರು ಹಣ ಮಾಡಬಾರದು ಎಂದು ಯಾರೊಬ್ಬರು ಈಗ ಹೇಳಲಾರರು. ನಾವು ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಬಯಸುತ್ತಿದ್ದೇವೆ. ರಸ್ತೆ ನಿರ್ಮಾಣದಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಣ ಲೂಟಿ ಮಾಡಬಾರದು. ಹಣ  ಮಾಡಿ.. ಆದರೆ, ಅದು ಹೇಗಿರಬೇಕೆಂದರೆ, ದಾಲ್ ಸಾಂಬಾರ್‌ನಲ್ಲಿರುವ ಉಪ್ಪಿನಂತಿರಬೇಕು. ಆದರೆ, ನೀವು ಸಾರ್ವಜನಿಕ ಹಣ ಲೂಟಿ ಮಾಡಬಹುದು ಎಂದು ಬಯಸಿದರೆ, ಬಿಜೆಪಿ ಸರ್ಕಾರ ಅಂತಹವರನ್ನು ಸುಮ್ಮನೆ  ಬಿಡಲಾರದು” ಎಂದು ಮೌರ್ಯ ಎಚ್ಚರಿಕೆ ನೀಡಿದ್ದಾರೆ.
ಯೋಗಿ ಆದಿತ್ಯನಾಥ್ ಸರಕಾರದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ವೌರ್ಯ ಅವರು ಉಸ್ತುವಾರಿಯಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇನ್ನು ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೀಡಾಗುತ್ತಿದ್ದಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರ ಬೆಂಬಲಿಗರು, “ಮಿತವಾಗಿ ಲಂಚ ತೆಗೆದುಕೊಳ್ಳಿ” ಎಂದು ಮೌರ್ಯ ಶಿಫಾರಸು  ಮಾಡಿದಂತೆ ಅವರ ಹೇಳಿಕೆ ಇತರಿಗೆ ಕೇಳಿದೆ. ಆದರೆ ಮೌರ್ಯ ಅವರ ಹೇಳಿಕೆಯನ್ನು ತಿರುಚಲಾಗಿದ್ದು, ಉಪ ಮುಖ್ಯಮಂತ್ರಿ ಲಂಚ ತೆಗೆದುಕೊಳ್ಳುವುದನ್ನು ಸ್ಪಷ್ಟವಾಗಿ ವಿರೋಧಿಸುತ್ತಾರೆ ಎಂದು ಮೌರ್ಯ ಅವರ ಸಹಾಯಕರು  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com