ಬಿಹಾರದಲ್ಲಿ ಅಹಮದಾಬಾದ್ ಸ್ಫೋಟ ಪ್ರಕರಣದ ಆರೋಪಿ ಬಂಧನ

2008ರ ಅಹಮದಾಬಾದ್ ಸ್ಫೋಟದೊಂದಿಗೆ ನಂಟು ಹೊಂದಿದೆ ಆರೋಪದ ಮೇಲೆ ಶಂಕಿತ ಉಗ್ರ ಹಾಗೂ ಆತನ ಸಹಚರ ಸೇರಿದಂತೆ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪಾಟ್ನಾ: 2008ರ ಅಹಮದಾಬಾದ್ ಸ್ಫೋಟದೊಂದಿಗೆ ನಂಟು ಹೊಂದಿದೆ ಆರೋಪದ ಮೇಲೆ ಶಂಕಿತ ಉಗ್ರ ಹಾಗೂ ಆತನ ಸಹಚರ ಸೇರಿದಂತೆ ಮೂವರನ್ನು ಬಂಧಿಸಿರುವುದಾಗಿ ಗುರುವಾರ ಬಿಹಾರ ಪೊಲೀಸರು ತಿಳಿಸಿದ್ದಾರೆ.
ಗಯಾ ಪ್ರದೇಶದ ಸಿವಿಲ್ ಲೈನ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಂಕಿತ ಉಗ್ರ ತೌಫಿಖ್ ಅಲಂನನ್ನು ನಿನ್ನೆ ರಾತ್ರಿ ಬಿಹಾರ ಉಗ್ರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ಸೈಬರ್ ಕಫೆ ಮಾಲೀಕರೊಬ್ಬರು ನೀಡಿದ ಮಾಹಿತಿ ಆಧಾರದ ಮೇಲೆ ತೌಫಿಖ್ ಅಲಂ, ಆತನ ಸಹಚರ ಸನಾ ಖಾನ್ ಹಾಗೂ ಅವರ ಸ್ಥಳೀಯ ಸಹಾಯಕ ಶಬೀರ್ ಖಾನ್ ನನ್ನು ಬಂಧಿಸಲಾಗಿದೆ. ಶಬೀರ್ ಖಾನ್ ತೌಫಿಖ್ ಹಲವು ವರ್ಷಗಳಿಂದ ಗಯಾದಲ್ಲಿ ಆಶ್ರಯ ನೀಡಿದ್ದ ಎನ್ನಲಾಗಿದೆ.
ಓರ್ವ ಶಂಕಿತ ಉಗ್ರ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಅಹಮದಾಬಾದ್ ಸ್ಫೋಟದಲ್ಲಿ ಅವರ ಪಾತ್ರವಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ವಿಚಾರಣೆ ಮುಂದುವರೆದಿದೆ ಎಂದು ಗಯಾ ಎಸ್ಎಸ್ ಪಿ ಗರಿಮಾ ಮಲಿಕ್ ಅವರು ತಿಳಿಸಿದ್ದಾರೆ.
ಜುಲೈ 26, 2008ರಲ್ಲಿ ಅಹಮದಾಬಾದ್ ನಲ್ಲಿ ನಡೆದ ಸರಣಿ ಸ್ಫೋಟದಲ್ಲಿ 56 ಮಂದಿ ಮೃತಪಟ್ಟಿದ್ದರು. ಅಲ್ಲದೆ 200ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು. ತೌಫಿಖ್ ಅಲಂ ಈ ಸರಣಿ ಸ್ಫೋಟದ ಪ್ರಕರಣದ ಪ್ರಮುಖ ಆರೋಪಿ ಎಂದು ಪೊಲೀಸರು ಮೂಲಗಳು ತಿಳಿಸಿವೆ.
ಶಂಕಿತ ಉಗ್ರನ ಬಂಧನದ ಕುರಿತು ಗುಜರಾತ್ ಉಗ್ರ ನಿಗ್ರಹ ದಳಕ್ಕೆ ಮಾಹಿತಿ ನೀಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಹಾಬೋಧಿ ದೇವಸ್ಥಾನಕ್ಕೆ ಹೆಚಿನ ಭದ್ರತೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com